ADVERTISEMENT

ಬಿಲ್ಲುಗಾರಿಕೆ: ಆತ್ಮಾವಲೋಕನ ನಡೆಯಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ಜುಲೈ 2021, 19:30 IST
Last Updated 30 ಜುಲೈ 2021, 19:30 IST

ಪ್ರತೀ ಬಾರಿ ಒಲಿಂಪಿಕ್ಸ್‌ ಕ್ರೀಡಾಕೂಟದ ಆರಂಭದಲ್ಲಿ ಬಿಲ್ಲುಗಾರಿಕೆಯು (ಆರ್ಚರಿ) ಭಾರತೀಯರಲ್ಲಿ ಪದಕದ ಭರವಸೆ ಹುಟ್ಟಿಸುತ್ತದಾದರೂ ಬಳಿಕ ಸತತವಾಗಿ ವಿಫಲವಾಗುತ್ತಿದೆ. ಇತರ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಗೆದ್ದು ರಾರಾಜಿಸುವ ನಮ್ಮ ಬಿಲ್ಲುಗಾರರು ಒಲಿಂಪಿಕ್ಸ್‌ನಲ್ಲಿ ಅರ್ಹತಾ ಸುತ್ತಿನಲ್ಲೇ ಎಡವುತ್ತಿದ್ದಾರೆ. ಕಳೆದ ತಿಂಗಳು ಆರ್ಚರಿ ಜಾಗತಿಕ ರ‍್ಯಾಂಕಿಂಗ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ಭಾರತೀಯರೆಲ್ಲರ ಸಂಭ್ರಮಕ್ಕೆ ಕಾರಣರಾಗಿದ್ದ ದೀಪಿಕಾ ಕುಮಾರಿ ಈ ಬಾರಿ ಸೆಮಿಫೈನಲ್ ತಲುಪಲು ಸಹ ವಿಫಲರಾಗಿದ್ದಾರೆ.

ಲಿಂಬಾ ರಾಮ್‌ ಅವರಿಂದ ಇತ್ತೀಚಿನ ಪ್ರತಿಭೆ ದೀಪಿಕಾ ಕುಮಾರಿಯವರವರೆಗೂ ಒಲಿಂಪಿಕ್ಸ್ ಪದಕದ ವಿಷಯದಲ್ಲಿ ಭಾರತೀಯರಿಗೆ ಭ್ರಮನಿರಸನವಾಗುತ್ತಿದೆ. ಧನುರ್ವಿದ್ಯೆಯಲ್ಲಿ ರಾಮ, ಅರ್ಜುನನ ಸ್ಫೂರ್ತಿಯಿಂದ ವಿಶ್ವಗುರುವಾಗಬೇಕಿದ್ದ ಭಾರತವು ಹೀಗೆ ವಿಫಲವಾಗುತ್ತಿರುವುದಕ್ಕೆ ರಾಷ್ಟ್ರೀಯ ಬಿಲ್ಲುಗಾರಿಕಾ ಸಂಸ್ಥೆ ಆತ್ಮವಿಮರ್ಶೆ ಮಾಡಿಕೊಂಡು, ಭವಿಷ್ಯದಲ್ಲಿ ಪದಕದ ಕೊರತೆ ನೀಗಿಸಲು ಪ್ರಯತ್ನಿಸಲಿ.

- ಡಾ. ಜ್ಞಾನೇಶ್ವರ ಕೆ.ಬಿ.,ಬೆಳಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.