ADVERTISEMENT

ನಾನು... ಹೆಸರಿನ ನಾನು...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ಜುಲೈ 2021, 19:30 IST
Last Updated 28 ಜುಲೈ 2021, 19:30 IST

ಸಂವಿಧಾನದ ನಿಯಮದಂತೆ ಪ್ರಮಾಣವಚನ ಸ್ವೀಕಾರ ಮಾಡುವವರು ನಿಗದಿತ ಲಿಖಿತ ಪಠ್ಯವನ್ನು ಓದುವ ಪರಿಪಾಟ ಅನೂಚಾನವಾಗಿ ನಡೆದುಬಂದಿದೆ. ವಾಸ್ತವವಾಗಿ ಈ ಪಠ್ಯದ ಒಕ್ಕಣೆಯಲ್ಲಿ ನುಸುಳಿರುವ ಒಂದು ದೋಷವನ್ನು ಇನ್ನೂ ಯಾರೂ ಗಮನಿಸದಿರುವುದು ವಿಷಾದನೀಯ.

ದಶಕಗಳ ಹಿಂದೆ ಯಾರೋ ಅಧಿಕಾರಿ ಇಂಗ್ಲಿಷಿನದ್ದನ್ನು ಮಕ್ಕಿ ಕಾ ಮಕ್ಕಿಯಂತೆ ಕನ್ನಡೀಕರಿಸುವಾಗ ಉಳಿದ ಆ ಕೃತಕತೆ ಹತ್ತಾರು ಮುಖ್ಯಮಂತ್ರಿಗಳು, ನೂರಾರು ಸಚಿವರು, ಸಾವಿರಾರು ಶಾಸಕರು ಅಧಿಕಾರ ಸ್ವೀಕರಿಸಿರುವಾಗಲೂ ಇನ್ನೂ ಹಾಗೆಯೇ ಮುಂದುವರಿದಿದೆ. ಇಂಗ್ಲಿಷ್‌ಗೂ ಕನ್ನಡಕ್ಕೂ ಭಾಷೆ, ವಾಕ್ಯ ಸಂರಚನೆಯಲ್ಲಿ ವ್ಯತ್ಯಾಸವಿರುವುದನ್ನು ಗಮನಿಸದಿದ್ದರೆ ಈ ಆಭಾಸ ಪುನರಾವರ್ತನೆಯಾಗುತ್ತಲೇ ಇರುತ್ತದೆ.

‘ನಾನು... ಹೆಸರಿನ ನಾನು...’ ಎಂದು ಓದುವ ಬದಲು, ‘... ಹೆಸರಿನ ನಾನು’ ಎಂದು ಓದುವುದು ಸುಲಲಿತವೂ ಸಹಜವೂ ಆಗುವುದಿಲ್ಲವೇ? ಬೇಕಿದ್ದರೆ ಇದನ್ನೇ ‘ನಾನು ...’ ಎಂದೂ ಓದಬಹುದು. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕನ್ನಡದ ಗೌರವ ಕಾಪಾಡಬೇಕು.

ADVERTISEMENT

- ಡಾ. ಟಿ.ಗೋವಿಂದರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.