ADVERTISEMENT

ಅನಗತ್ಯ ಟ್ರೋಲ್‌, ನಾಚಿಕೆಗೇಡಿನ ನಡೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಜುಲೈ 2021, 19:30 IST
Last Updated 27 ಜುಲೈ 2021, 19:30 IST

‘ಸಾರ್, ಕೊರೊನಾ ಬಂದ್ರೆ ಡೋಲೊ 650 ಮಾತ್ರೆ, ಬಿಸಿ ರಾಗಿ ಮುದ್ದೆ... ಅಯ್ಯೋ ಸಾರ್, ಅದು ಹೇಳಿಬುಟ್ಟು ಬರುತ್ತಾ...’ ಕಳೆದ ಒಂದು ತಿಂಗಳಿನಿಂದ ಈ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿವೆ, ಅದೂ ವ್ಯಂಗ್ಯದ ಧಾಟಿಯಲ್ಲಿ. ಎಚ್.ಡಿ.ಕೋಟೆ ಸೊಬಗಿನ ಗ್ರಾಮೀಣ ಆಡುಭಾಷೆಯಲ್ಲಿ ಇದ್ದದ್ದು ಇದ್ದಂತೆ ನೇರವಾಗಿ ಹೇಳಿ, ಸುಶಿಕ್ಷಿತರೇ ನಾಚುವ ರೀತಿಯಲ್ಲಿ ಆಡಳಿತಾರೂಢ ಸರ್ಕಾರವನ್ನು ಖಾಸಗಿ ವಾಹಿನಿಯೊಂದರಲ್ಲಿ ಪ್ರಶ್ನಿಸಿದ ಯುವತಿಯೊಬ್ಬರ ಮಾತುಗಳು ಹೀಗೆ ವಿವಿಧ ಸ್ವರೂಪ
ಗಳಲ್ಲಿ ಟ್ರೋಲ್ ಆಗಿರುವುದು ನಾಚಿಕೆಗೇಡು.

ಸಮಸ್ತ ಆಡಳಿತ ವರ್ಗವನ್ನು ಪ್ರಶ್ನೆ ಮಾಡುವ ಮೂಲಕ ಈ ಯುವತಿ ಅಸಂಖ್ಯಾತ ಜನರ ಬವಣೆ, ಸಂಕಷ್ಟಗಳ ಪ್ರತಿನಿಧಿಯಂತೆ ಕಂಡುಬಂದರು. ಹೀಗೆ ದಿಟ್ಟವಾಗಿ ಪ್ರಶ್ನಿಸುವಂತಹ ಸತ್ಪ್ರಜೆಗಳ ಸಂಖ್ಯೆ ಹೆಚ್ಚಾದಾಗಲೇ ಸರ್ಕಾರಗಳು ಎಚ್ಚೆತ್ತುಕೊಂಡು ಮೈಯೆಲ್ಲಾ ಕಣ್ಣಾಗಿ ಆಡಳಿತ ನಡೆಸುವುದು. ಆದರೆ ಈ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಯುವಸಮೂಹ ಅವರ ಮಾತಿನ ಸಾರಾಂಶದ ತುಣುಕನ್ನು ವಾಕರಿಕೆ ಬರುವ ಮಟ್ಟಕ್ಕೆ ಚಿತ್ರ-ವಿಚಿತ್ರ ಭಂಗಿಯಲ್ಲಿ ಆಡಿಕೊಳ್ಳುತ್ತಿರುವುದು ವಿಪರ್ಯಾಸ. ಯುವಸಮೂಹ ವೈಚಾರಿಕ ಚಿಂತನೆಗಳನ್ನು ಮೊದಲು ರೂಢಿಸಿಕೊಳ್ಳಬೇಕಿದೆ. ಸಾಧ್ಯವಾದರೆ ಈ ಯುವತಿಗೆ ಹಾಗೂ ಅವರ ವಟಾರಕ್ಕೆ ಕೈಲಾದಷ್ಟು ಆರ್ಥಿಕ ಸಹಾಯ ನೀಡಲು, ಸರ್ಕಾರದ ಮಟ್ಟದಲ್ಲಿ ಅಗತ್ಯ ಮೂಲ ಸೌಕರ್ಯ ಗಳನ್ನು ಒದಗಿಸಲು ಮುಂದಾಗಬೇಕಿದೆ.

- ಅನಿಲ್ ಕುಮಾರ್,ನಂಜನಗೂಡು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.