ADVERTISEMENT

ರೈಲು ಸಂಚಾರ ವ್ಯತ್ಯಯ: ಎಲ್ಲರಿಗೂ ತಿಳಿಯಲಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 17:23 IST
Last Updated 24 ನವೆಂಬರ್ 2019, 17:23 IST

ವಿವಿಧ ರೈಲುಗಳ ಓಡಾಟಕ್ಕೆ ಸಂಬಂಧಿಸಿದ ಹೊಸ ವೇಳಾಪಟ್ಟಿಯನ್ನು ಬರೀ ರೈಲು ನಿಲ್ದಾಣಗಳಲ್ಲಿ ಪ್ರಕಟಿಸಲಾಗುತ್ತಿದೆ. ಇದರಿಂದ ಈ ವೇಳಾಪಟ್ಟಿಯನ್ನು ನೋಡಲು ಪ್ರಯಾಣಿಕರು ರೈಲು ನಿಲ್ದಾಣಕ್ಕೇ ಹೋಗಬೇಕಾಗುತ್ತದೆ. ಸಹಾಯವಾಣಿಗೆ ಕರೆ ಮಾಡಿದರೆ ಸದಾ ನಿರುತ್ತರವೇ ಬರುತ್ತದೆ. ಆದ್ದರಿಂದ ರೈಲುಗಳ ಸಂಚಾರದ ಸಮಯದಲ್ಲಿ ವ್ಯತ್ಯಾಸವಾದಾಗ, ಹೊಸ ರೈಲುಗಳನ್ನು ಬಿಟ್ಟಾಗ ಮತ್ತು ರೈಲುಗಳ ಹೆಸರುಗಳನ್ನು ಬದಲಿಸಿದಾಗ ಈ ಕುರಿತು ಪತ್ರಿಕೆಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ರೈಲ್ವೆ ಇಲಾಖೆ ಈ ಕುರಿತು ಗಮನಹರಿಸಲಿ.

-ಇಂದಿರಾ ಶ್ರೀಧರ್,ಮಳಲಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT