ADVERTISEMENT

ಮಾರುಹೋಗದಿರಿ ಯುವಕರೇ...

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 18:43 IST
Last Updated 19 ಡಿಸೆಂಬರ್ 2019, 18:43 IST

ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವುದು ಅಪಾಯಕಾರಿ ಮಟ್ಟ ತಲುಪುತ್ತಿದೆ. ಇಲ್ಲಿ ಹರಿಬಿಡುವ ವಿಪರೀತವೆನ್ನುವಷ್ಟು ರಾಜಕೀಯಪ್ರೇರಿತ ಸುದ್ದಿಗಳು ಜನರಲ್ಲಿ ವೈಷಮ್ಯ ಸೃಷ್ಟಿಸುವ ರಾಜಕಾರಣಕ್ಕೆ ಕಾರಣವಾಗಿವೆ. ಇದನ್ನೆಲ್ಲ ಪಕ್ಷಾತೀತವಾಗಿ ನೋಡಬೇಕಾದ ಮತ್ತು ಅದರ ಹಿನ್ನೆಲೆ, ಇತಿಹಾಸ ಅರಿತು ಸ್ವತಂತ್ರವಾಗಿ ಆಲೋಚಿಸಿ ಒಂದು ನಿರ್ಧಾರಕ್ಕೆ ಬರಬೇಕಾದ ಪ್ರಜ್ಞಾವಂತ ಯುವಕರೂ ಇದಕ್ಕೆ ಮಾರುಹೋಗುತ್ತಿರುವುದು ವಿಪರ್ಯಾಸ.

ಚರ್ಚೆಗಳು ಆರೋಗ್ಯಕರವಾಗಿದ್ದರಷ್ಟೇ ಚಂದ. ಸಲ್ಲದ ರಾಜಕೀಯ ವಿಷಯಗಳನ್ನು ಚರ್ಚಿಸುತ್ತಾ ಸಮಯ ಹಾಳುಮಾಡಿಕೊಳ್ಳುವ ಬದಲು, ಚರ್ಚೆಗೆ ಅಥವಾ ಹಂಚಿಕೊಳ್ಳಲು ಪರಿಸರ ಸಮಸ್ಯೆ, ವಿಜ್ಞಾನ– ತಂತ್ರಜ್ಞಾನದ ಆವಿಷ್ಕಾರ, ಸಾಮಾನ್ಯ ಜ್ಞಾನ, ಸಾಹಿತ್ಯ, ಹಾಸ್ಯದಂತಹ ಬಹಳಷ್ಟು ವಿಷಯಗಳಿರುತ್ತವೆ. ಇಂತಹ ಸಂಗತಿಗಳಿಗೆ ಆದ್ಯತೆ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳನ್ನು ರಚನಾತ್ಮಕವಾಗಿ ಉಪಯೋಗಿಸಿಕೊಳ್ಳುವುದು ಒಳ್ಳೆಯದು.

ಕಾರ್ತಿಕ ಅ. ಈರಗಾರ, ಹುಬ್ಬಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.