ADVERTISEMENT

ಪಕ್ಷ ಇರುವುದು ಲಾಭ ಮಾಡಿಕೊಳ್ಳಲಿಕ್ಕೆ ಅಲ್ಲ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 18:41 IST
Last Updated 19 ಡಿಸೆಂಬರ್ 2019, 18:41 IST

‘ಶಾಸಕ ಜಿ.ಟಿ.ದೇವೇಗೌಡರು ಪಕ್ಷದಿಂದ ಏನೂ ಮಾಡಿಕೊಂಡಿಲ್ಲವಾ’ ಎಂದು ಪ್ರಶ್ನಿಸಿದ್ದಾರೆ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ (ಪ್ರ.ವಾ., ಡಿ. 19). ಅಂದರೆ, ಏನಾದರೂ ಲಾಭ ಮಾಡಿಕೊಳ್ಳಲು ಮಾತ್ರ ಪಕ್ಷಗಳಿವೆಯೇ? ಪಕ್ಷಗಳಿರುವುದು ಒಂದು ರಾಜಕೀಯ ಶಕ್ತಿಯಾಗಿ ಬೆಳೆದು, ಅಧಿಕಾರ ಗಳಿಸಿ ಜನರಿಗೆ ಒಳ್ಳೆಯದು ಮಾಡಲಿಕ್ಕಾಗಿಯೇ ಹೊರತು ಲಾಭ ಮಾಡಿಕೊಳ್ಳಲಲ್ಲ.

ಹಾಗೆ ಲಾಭ ಮಾಡಿಕೊಳ್ಳುವ ಭಾಷೆಯ ಒರಟು ರೂಪವೇ ‘ರಾಜಕೀಯದಲ್ಲಿ ನಾವೇನೂ ದುಡಿದುಕೊಂಡಿಲ್ಲ’ ಎಂಬ ಮಾತಾಗಿದ್ದು, ಗ್ರಾಮ ಪಂಚಾಯಿತಿ ಸದಸ್ಯರಿಂದಲೂ ಈಚೆಗೆ ಅದು ಕೇಳಿಬರುವಂತೆ ಆಗಿರುವುದು. ಹೀಗಾಗಿ, ಜನರಿಗೆ ಒಳ್ಳೆಯದು ಮಾಡಬೇಕೆಂಬ ಮನೋಭಾವ ಹೋಗಿ ಲಾಭ ಮಾಡಿಕೊಳ್ಳಬೇಕೆಂಬುದು ಯುವಕರಲ್ಲಿ ಬೆಳೆಯುತ್ತಿದೆ. ಮುಖ್ಯಮಂತ್ರಿಯಾಗಿದ್ದವರೇ ಇಂಥದ್ದಕ್ಕೆ ನೀರೆರೆಯುವುದು ದುರಂತ.

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.