ADVERTISEMENT

ವಾಚಕರ ವಾಣಿ: ಕೈ ಚೊಕ್ಕಟ ಇರಬೇಕು; ನೀರೂ ಚೊಕ್ಕಟ ಇರಬೇಕು

​ಪ್ರಜಾವಾಣಿ ವಾರ್ತೆ
Published 2 ಮೇ 2021, 19:45 IST
Last Updated 2 ಮೇ 2021, 19:45 IST

ಲಕ್ಷಾಂತರ ಜನರು ರಾಜಧಾನಿಯಿಂದ ಗುಳೆ ಹೋಗಿದ್ದಾರೆ. ಸಣ್ಣ ನಗರ, ಪಟ್ಟಣಗಳಲ್ಲಿ ಈ ಬೇಸಿಗೆಯಲ್ಲಿ ನೀರಿನ ಅಭಾವ ಜಾಸ್ತಿ ಇದೆ. ಇದ್ದಬದ್ದ ಕೆರೆ, ಹಳ್ಳಕೊಳ್ಳಗಳ ಜಲಮೂಲ ಬತ್ತುತ್ತಿದೆ, ಕೊಳಕು ಹೆಚ್ಚುತ್ತಿದೆ. ಈ ದಿನಗಳಲ್ಲೇ ಕಲುಷಿತ ನೀರಿನಿಂದಾಗಿ ಕಾಮಾಲೆ, ಅತಿಸಾರ, ವಿಷಮ ಶೀತಜ್ವರ (ಟೈಫಾಯಿಡ್‌), ದಢಾರ ಮುಂತಾದ ಕಾಯಿಲೆಗಳೂ ಹೆಚ್ಚುತ್ತವೆ. ಅಂಥ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಜಾಗವೂ ಇರಲಿಕ್ಕಿಲ್ಲ, ಆದ್ಯತೆಯೂ ಇರುವುದಿಲ್ಲ. ಕ್ಲಿನಿಕ್‌ ಅಥವಾ ಔಷಧ ಅಂಗಡಿಗಳಿಗೆ ಹೋಗಲು ವಾಹನಗಳೂ ಸಿಗದಂತೆ ಆಗಬಹುದು.

ನೀರಿನ ವಿಷಯದಲ್ಲಿ ತುಸುವೇ ಅಜಾಗ್ರತೆ ಉಂಟಾದರೂ ಕೋವಿಡ್‌ ಬದಲಿಗೆ ಬೇರೇನೋ ಅಮರಿಕೊಂಡು ವಿಷಮ ಪರಿಸ್ಥಿತಿ ಉಂಟಾದೀತು. ಮಕ್ಕಳಿಗೆ ಕೊರೊನಾ ಅಷ್ಟಾಗಿ ಬಾಧಿಸದಿದ್ದರೂ ಕೊಳೆನೀರಿನಿಂದ ಬರುವ ಕಾಯಿಲೆಗಳು ಮಕ್ಕಳನ್ನೇ ಹೆಚ್ಚಾಗಿ ಕಾಡುತ್ತವೆ. ಆರೋಗ್ಯ ಇಲಾಖೆಯ ಗಮನವೆಲ್ಲ ಕೋವಿಡ್‌ ಕಡೆ ಇರುವಾಗ, ನಮ್ಮ ಹುಷಾರಲ್ಲಿ ನಾವಿರಬೇಕಾದುದು ತುಂಬ ಅಗತ್ಯ. ಬೆಂಗಳೂರಿನ ಕಾದ ಕಾವಲಿಯಿಂದ ನೆಗೆದವರು ಸಣ್ಣ ಊರುಗಳ ವಿಷದ ಕೂಪಕ್ಕೆ ಬೀಳುವಂತೆ ಆಗಬಾರದು.

ನಾಗೇಶ ಹೆಗಡೆ, ಸಿದ್ರಾಮಪ್ಪ ದಿನ್ನಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.