ADVERTISEMENT

ಚನ್ನಪಟ್ಟಣದ ಗೊಂಬೆ ಉದ್ಯಮ: ಪರ್ಯಾಯ ಹುಡುಕಾಟ; ಜಡತ್ವ ಬೇಡ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 20:49 IST
Last Updated 28 ಸೆಪ್ಟೆಂಬರ್ 2022, 20:49 IST

ಬೆಂಗಳೂರು– ಮೈಸೂರು ದಶಪಥ ಹೆದ್ದಾರಿಯ ಕಾರಣದಿಂದ ಚನ್ನಪಟ್ಟಣದ ಗೊಂಬೆ ಉದ್ಯಮಕ್ಕೆ ಹೊಡೆತ ಬಿದ್ದಿದೆ ಎಂದು ವರದಿಯಾಗಿದೆ. ಇದು, ಈ ಹೆದ್ದಾರಿಯ ಕಾರಣದಿಂದ ಬಿಡದಿಯ ತಟ್ಟೆ ಇಡ್ಲಿ ಹೋಟೆಲ್ ಮಾಲೀಕರು ಎದುರಿಸುತ್ತಿರುವ ಸಮಸ್ಯೆಯ ಇನ್ನೊಂದು ಮುಖ ಎನ್ನಬಹುದು. ತಂತ್ರಜ್ಞಾನವನ್ನು ಬಳಸಿಕೊಂಡು, ಇ-ಕಾಮರ್ಸ್ ಹೆಸರಿನಲ್ಲಿ ವ್ಯಾಪಾರಿಗಳು ಗ್ರಾಹಕರ ಮನೆ ಬಾಗಿಲಿಗೆ ತಲುಪುತ್ತಿದ್ದಾರೆ. ಆದರೆ ಚನ್ನಪಟ್ಟಣದ ಗೊಂಬೆ ತಯಾರಕರು ಇನ್ನೂ ಹಳೆಯ ವ್ಯಾಪಾರ ಸೂತ್ರಗಳಿಗೆ ಜೋತುಬಿದ್ದು, ಅಂಗಡಿ ಬಾಗಿಲಿಗೆ ಬಂದು ಕೊಳ್ಳುವ ಗ್ರಾಹಕರನ್ನೇ ನಂಬಿ ಉದ್ಯಮ ನಡೆಸುತ್ತಿರುವುದು ಅವರಲ್ಲಿನ ದೂರದೃಷ್ಟಿಯ ಕೊರತೆಯನ್ನು ತೋರಿಸುತ್ತದೆ.

ಹಾಗೆಯೇ, ಹೆದ್ದಾರಿ ಯೋಜನೆ ಕಾಮಗಾರಿಯ ಅವಧಿಯಲ್ಲಿ ತಮ್ಮ ಉದ್ಯಮಕ್ಕೆ ಪರ್ಯಾಯ ಮಾರುಕಟ್ಟೆ ಹಾಗೂ ಮಾರಾಟ ವಿಧಾನಗಳನ್ನು ಹುಡುಕದೇ ಇದ್ದದ್ದು ಏನನ್ನು ತೋರಿಸುತ್ತದೆ? ಪ್ರತಿಯೊಂದು ಉದ್ಯಮವೂ ಅಸ್ತಿತ್ವಕ್ಕಾಗಿ ಹೋರಾಡುವ ಪರಿಸ್ಥಿತಿ ಇದೆ. ಉದ್ಯಮದ ಉಳಿವಿಗೆ ಹಾಗೂ ಬೆಳವಣಿಗೆಗೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗುತ್ತದೆ. ಇಡೀ ಜಗತ್ತಿಗೆ ಮಾರುಕಟ್ಟೆಯಾಗಿರುವ ಭಾರತವು ಚನ್ನಪಟ್ಟಣದ ಗೊಂಬೆಗಳನ್ನು
ಪ್ರೋತ್ಸಾಹಿಸಲಾರದೇ?

ಜಯಮಹದೇವ ಸ್ವಾಮಿ ಎಂ.,ರಾಮನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.