ADVERTISEMENT

ವಾಚಕರ ವಾಣಿ | ಘನತೆಗೆ ತಕ್ಕುದಲ್ಲದ ನಡೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 22:15 IST
Last Updated 11 ಆಗಸ್ಟ್ 2022, 22:15 IST

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿಯ ಸಖ್ಯದಲ್ಲಿದ್ದಾಗ ಅವರನ್ನು ‘ಅಪ್ರತಿಮ ರಾಜಕಾರಣಿ’ ಎಂದಿದ್ದ ಬಿಜೆಪಿ ಮುಖಂಡ ಸುಶೀಲ್ ಮೋದಿ ಅವರು, ನಿತೀಶ್ ‘ಉಲ್ಟಾ’ ಹೊಡೆದು, ಬಿಜೆಪಿಯ ಸಹವಾಸ ತೊರೆದಾಗ ‘ನಿತೀಶ್, ಉಪರಾಷ್ಟ್ರಪತಿಯಾಗಲು ಇಚ್ಛಿಸಿದ್ದರು’ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಒಂದು ಪಕ್ಷವಾಗಿ ಬಿಜೆಪಿ ಈಗ ತುಂಬಾ ಬೆಳೆದಿದೆ. ಅದರ ಜವಾಬ್ದಾರಿ ಕೂಡ ಹೆಚ್ಚಿದೆ. ಆದರೆ ಅದರ ನಾಯಕರು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಪ್ರಬುದ್ಧರಾಗುತ್ತಿಲ್ಲ ಎನ್ನುವುದಕ್ಕೆ ತಮ್ಮ ರಾಜಕೀಯ ವಿರೋಧಿಗಳನ್ನು ವ್ಯಂಗ್ಯ ಮಾಡುವ, ಕಾಲೆಳೆಯುವ ಪ್ರವೃತ್ತಿ ಹೆಚ್ಚುತ್ತಿರುವುದು ಕನ್ನಡಿ ಹಿಡಿಯುತ್ತದೆ. ಸುಶೀಲ್ ಮೋದಿ ಹೇಳಿರುವುದು ನಿಜವೆಂದು ಭಾವಿಸಿದರೂ ‘ನಿತೀಶ್ ಉಪರಾಷ್ಟ್ರಪತಿ’ ಆಗಲು ಇಚ್ಛಿಸಿದ್ದರೆ ಅದು ಘೋರ ತಪ್ಪೇ?

-ಕೆ.ಎನ್.ಭಗವಾನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT