ADVERTISEMENT

ವಾಚಕರ ವಾಣಿ: ಭಾರತೀಯ ಕ್ರಿಕೆಟ್‌: ಆಮೂಲಾಗ್ರ ಬದಲಾವಣೆಯಾಗಲಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 22:15 IST
Last Updated 1 ನವೆಂಬರ್ 2021, 22:15 IST

ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿನ ಭಾರತದ ಹೀನಾಯ ಸೋಲು ಭಾರತೀಯ ಕ್ರಿಕೆಟ್‌ನಲ್ಲಿ ಆಡಳಿತ ಮಂಡಳಿಯಿಂದ ಹಿಡಿದು ಎಲ್ಲವನ್ನೂ ಆಮೂಲಾಗ್ರವಾಗಿ ಬದಲಿಸಬೇಕೆಂಬ ಕ್ರಿಕೆಟ್‌ ಅಭಿಮಾನಿಗಳ ಕೂಗಿಗೆ ಬಲ ನೀಡಿದೆ. ಆಟದಲ್ಲಿ ಗೆಲುವಿನಂತೆ ಸೋಲು ಕೂಡಾ ಒಂದು ಭಾಗ. ಆದರೆ, ಸೋಲು ವೀರೋಚಿತವಾಗಿರ
ಬೇಕೇ ವಿನಾ ಶರಣಾಗತಿ ಆಗಿರಬಾರದು.

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ವಿರುದ್ಧ ಭಾರತದ ಆಟದ ವೈಖರಿಯನ್ನು ನೋಡಿದಾಗ, ಭಾರತದ ಕ್ರಿಕೆಟ್‌ಗೆ ಗಂಭೀರ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಅನಿಸುತ್ತಿದೆ. ದಶಕಗಳಿಂದ ಬ್ಯಾಟ್‌ ಬೀಸುತ್ತಿರುವವರು ಮತ್ತು ಬಾಲ್‌ ಎಸೆಯುವವರನ್ನು ಕೈಬಿಟ್ಟು ಹೊಸಬರನ್ನು ಪರಿಚಯಿಸುವ ಅನಿವಾರ್ಯ ಎದ್ದು ಕಾಣುತ್ತಿದೆ ಮತ್ತು ಅವರಿಗೆ ಸಾದನೆ ಆಧಾರಿತ ಶುಲ್ಕವನ್ನು ನಿಗದಿಪಡಿಸಬೇಕು ಎನ್ನುವ ಕೂಗೂ ಕೇಳುತ್ತಿದೆ. ತಂಡದ ಈ ಸಾಧನೆಗೆ ₹ 7 ಕೋಟಿ ಸಂಬಳದ ಕೋಚ್‌ ಬೇಕಿತ್ತೇ ಎನ್ನುವ ಆಕ್ರೋಶದಲ್ಲಿ ಅರ್ಥವಿದೆ.

ರಮಾನಂದ ಶರ್ಮಾ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.