
ಪ್ರಜಾವಾಣಿ ವಾರ್ತೆಸ್ವಾತಂತ್ರ್ಯದ 75ನೇ ವರ್ಷದ ಅಂಗವಾಗಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕೋರಿದೆ. ಎಲ್ಲರಿಗೂ ರಾಷ್ಟ್ರಧ್ವಜ ಸುಲಭವಾಗಿ ಲಭ್ಯವಾಗುವಂತೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ. ಅಲ್ಲದೆ ಹಾರಾಟದ ನಿಯಮಾವಳಿಗಳಿಗೆ ಸಹ ತಿದ್ದುಪಡಿ ತರಲಾಗಿದೆ. ಈ ಸಮಯದಲ್ಲಿ ರಾಷ್ಟ್ರಧ್ವಜದಲ್ಲಿನ ಕೇಸರಿ, ಬಿಳಿ, ಹಸಿರು ಬಣ್ಣಗಳ ಬಗ್ಗೆ, ಧ್ವಜದ ಮಧ್ಯದಲ್ಲಿ ಇರುವ ಅಶೋಕ ಚಕ್ರದ ಬಗ್ಗೆ ದಿನಪತ್ರಿಕೆಗಳು, ವಿವಿಧ ದೃಶ್ಯಮಾಧ್ಯಮಗಳ ಜೊತೆಗೆ ಭಿತ್ತಿಪತ್ರಗಳ ಮುಖೇನ ಸಹ ಅಗತ್ಯ ತಿಳಿವಳಿಕೆ ನೀಡುವುದು ಹೆಚ್ಚು ಸೂಕ್ತ.
-ಕೆ.ಪ್ರಭಾಕರ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.