ADVERTISEMENT

ದ್ವಿಭಾಷಾ ಸೂತ್ರವೇ ಪರಿಹಾರ

ಧರ್ಮರಾಜ ಎಂ. ಕಲ್ಯಾಣಿ. ಬೆಂಗಳೂರು
Published 20 ಮೇ 2019, 18:30 IST
Last Updated 20 ಮೇ 2019, 18:30 IST

50ವರ್ಷಗಳಹಿಂದೆಅಂದಿನಪ್ರಧಾನಿ ಇಂದಿರಾಗಾಂಧಿಅವರು ‘ತ್ರಿಭಾಷಾ ಸೂತ್ರವೇ ಭಾಷಾ ಸಮಸ್ಯೆಗೆ ಪರಿಹಾರ. ಇದಕ್ಕೂಉತ್ತಮಪರಿಹಾರವನ್ನು ಯಾರೂಸೂಚಿಸಿಲ್ಲ’ ಎಂದು ತಿರುವನಂತಪುರದಲ್ಲಿ ಹೇಳಿದ್ದಾರೆ (ಪ್ರ.ವಾ., 50 ವರ್ಷಗಳ ಹಿಂದೆ, ಮೇ19). ನನ್ನಪ್ರಕಾರ, ವಿವಿಧ ಭಾಷೆಗಳುಳ್ಳ ಭಾರತಕ್ಕೆ ದ್ವಿಭಾಷಾ ಸೂತ್ರವೇ ನ್ಯಾಯಯುತವಾದಪರಿಹಾರ.

ಆಯಾಪ್ರಾಂತದಲ್ಲಿ ಹೆಚ್ಚುಜನರುಮಾತನಾಡುವಭಾಷೆಯ ಜೊತೆಗೆ ಇಂಗ್ಲಿಷ್‌ ಇರಬೇಕು. ಉದಾಹರಣೆಗೆ: ಕರ್ನಾಟಕದಲ್ಲಿ ಕನ್ನಡ, ರಾಜ್ಯಗಳನಡುವೆಸಂಪರ್ಕಕ್ಕೆ, ವಾಣಿಜ್ಯವ್ಯವಹಾರಕ್ಕೆ, ವಿಜ್ಞಾನ ವ್ಯಾಸಂಗಕ್ಕೆ ಇಂಗ್ಲಿಷ್. ಕೆಲವರುಒಪ್ಪಬಹುದು. ಇನ್ನು ಕೆಲವರು ಒಪ್ಪದೇ ಇರಬಹುದು. ಅದರಲ್ಲೂ ಉತ್ತರ ಭಾರತದ ಕೆಲವರಿಗೆ ಇದು ರುಚಿಸದಿರಬಹುದು. ಅಂತಿಮವಾಗಿನ್ಯಾಯಯುತವಾಗಿ ಉಳಿಯಬೇಕಾದದ್ದು, ಉಳಿಯುವುದು ದ್ವಿಭಾಷಾಸೂತ್ರವೇ.ಹಿಂದಿಹೇರಿಕೆಯನ್ನುಒಪ್ಪಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT