ನಾವು ಕಳ್ಳರಲ್ಲ, ಕಳ್ಳರು ನಾವಲ್ಲ, ನಮ್ಮಲ್ಲಿ ಕಳ್ಳರು ಇಲ್ಲವೇ ಇಲ್ಲ. ಹಾಗಾದರೆ ಕಳ್ಳರು ಯಾರು?
ನಮ್ಮ ವಿರೋಧಿ(ಪಕ್ಷ)ಗಳೆಲ್ಲರೂ ಕಳ್ಳರೇ, ಅಲ್ಲಿಂದ ನಮ್ಮಲ್ಲಿಗೆ ಬಂದವರು– ಬರುವವರು ಕಳ್ಳರಲ್ಲ! ಯಾಕೆಂದರೆ, ನಾವು ಕಳ್ಳರಲ್ಲ, ನಮ್ಮಲ್ಲಿ ಕಳ್ಳರಿಲ್ಲ! ನಮ್ಮಲ್ಲಿಂದ ಅಲ್ಲಿಗೆ ಹೋದವರು ಖಂಡಿತ ಕಳ್ಳರೇ.
ಯಾಕೆಂದರೆ ಅವರಲ್ಲಿರುವುದು ಕಳ್ಳರೇ!ಇದ ನುಡಿವವನು ಸುಳ್ಳ!ಇದನೆಲ್ಲಾ ಗಮನಿಸಿಯೂ ಆರಿಸುವ ಕಳ್ಳನ ಮತದಾರ ಮಳ್ಳ! ಹರ ಹರ ಕಳ್ಳೇಶ್ವರ! ಓ ಕಾಪಾಡಿ ಇಂಡಿಯಾ ದೇಶವ– ಪ್ರಜಾಪ್ರಭುತ್ವವ.
(ಸ್ಫೂರ್ತಿ: ಇತ್ತೀಚೆಗಿನ ಐ.ಟಿ. ದಾಳಿ)
ಹೊಸನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.