ADVERTISEMENT

ವಾಚಕರ ವಾಣಿ: ಮಲೆನಾಡು ಆಗದಿರಲಿ ಬರನಾಡು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 19:31 IST
Last Updated 18 ಸೆಪ್ಟೆಂಬರ್ 2020, 19:31 IST

ಕೃಷಿ ಜಮೀನಿನ ಮೇಲೆ ವನ್ಯಪ್ರಾಣಿಗಳ ದಾಳಿ ನಿಯಂತ್ರಿಸಲು ಸಮಗ್ರ ದೃಷ್ಟಿಕೋನದ ಪ್ರಯತ್ನಗಳು ಬೇಕು ಎಂಬ ಕೇಶವ ಎಚ್. ಕೊರ್ಸೆ ಅವರ ವಿಚಾರ (ಪ್ರ.ವಾ., ಸೆ. 17) ಯೋಚಿಸುವಂತಹದ್ದು. ಪ್ರಾಣಿಗಳ ನೆಲೆಯನ್ನು ಮನುಷ್ಯ ಅತಿಕ್ರಮಣ ಮಾಡಿದ್ದಾನೆ. ಅವುಗಳಿಗೆ ಕಂದಕ ತೋಡುವುದು, ಅವುಗಳನ್ನು ಉರುಳಿಗೆ ಬೀಳಿಸುವುದು, ಮದ್ದಿಡುವುದು ಇವೆಲ್ಲಾ ಪ್ರಾಣಿಗಳಿಗೆ ನಾವು ಕೊಡುವ ತೊಂದರೆಯೇ ಸರಿ. ಅವುಗಳಿಗೆ ಬದುಕಲು ಜಾಗವಿಲ್ಲದಾದಾಗ ಊರಿಗೆ ನುಗ್ಗುವುದು ಸಹಜ.

ಈಗ ಶಿವಮೊಗ್ಗದಂತಹ ಮಲೆನಾಡಿನಲ್ಲಿ ಅವೈಜ್ಞಾನಿಕವಾಗಿ ಬಗರ್‌ಹುಕುಂ ಸಾಗುವಳಿಗೆ ಅವಕಾಶ ಮಾಡಿರುವುದು ಕಾಡಿನ ಒತ್ತುವರಿಗೆ ಪೋತ್ಸಾಹಿಸಿದಂತೆ. ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ದೊಡ್ಡ ಮರಗಳು, ಒಳಹೊಕ್ಕರೆ ಬರೀ ಕೃಷಿ ಭೂಮಿ. ಇದನ್ನು ನೋಡಿದರೆ ತುಂಬಾ ನೋವಾಗುತ್ತದೆ. ಮಲೆನಾಡು ಹೋಗಿ ಬರನಾಡು ಆಗುವುದೇ ಎಂಬ ಆತಂಕ ಮೂಡುತ್ತದೆ. ಹೀಗಾಗದಂತೆ ತಡೆಯಲು ಸೂಕ್ತ ಕಾನೂನು ರೂಪಿಸಬೇಕಿದೆ. ಎಲ್ಲಾ ಸರ್ಕಾರಿ ಜಮೀನುಗಳಲ್ಲಿ ಸ್ಥಳೀಯ ವಾತಾವರಣಕ್ಕೆ ಅನುಕೂಲಕರವಾದ ಮರ- ಗಿಡಗಳನ್ನು ಬೆಳೆಸಬೇಕು. ಅತಿಕ್ರಮಣ ಮಾಡಲು ಅವಕಾಶ ಇರದಂತೆ ನೋಡಿಕೊಂಡು ಪರಿಸರ ಉಳಿಸಬೇಕು.

ಪ್ರತಿಭಾ, ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.