ADVERTISEMENT

ಧರ್ಮಗುರುಗಳು ಸಲಹೆ ನೀಡಲಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 20:30 IST
Last Updated 4 ಡಿಸೆಂಬರ್ 2020, 20:30 IST

ಇತಿಹಾಸದಲ್ಲಿ ಯಾವುದೇ ಸಂಸ್ಕೃತಿಯನ್ನು ಅವಲೋಕಿಸಿದರೂ ಧರ್ಮಗುರುಗಳಿಗೆ ಮಹತ್ವ ಇದ್ದುದು ತಿಳಿಯುತ್ತದೆ. ಹಿಂದೆ ರಾಜರ ಆಸ್ಥಾನದಲ್ಲಿ ರಾಜನಾದವನು ತೆಗೆದುಕೊಳ್ಳುತ್ತಿದ್ದ ಯಾವುದೇ ನಿರ್ಣಯದಲ್ಲಿ ಆ ಆಸ್ಥಾನದ ಗುರುವಿನ ಸಲಹೆ ಇದ್ದೇ ಇರುತ್ತಿತ್ತು. ಧರ್ಮದಿಂದ ರಾಜಕೀಯ ಮಾಡುತ್ತಿದ್ದ ಆ ಕಾಲಕ್ಕೂ ಧರ್ಮವನ್ನೇ ರಾಜಕೀಯ ದಾಳವನ್ನಾಗಿ ಬಳಸುತ್ತಿರುವ ಈ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಎಷ್ಟೇ ದೊಡ್ಡ ಧರ್ಮಗುರುವಾದರೂ ಸಂವಿಧಾನದ ಮುಂದೆ ಅವರೂ ಎಲ್ಲರಂತೆ ಈ ದೇಶದ ಪ್ರಜೆಯೇ!

ಪ್ರಜೆ ಅಂದಮೇಲೆ‌ ಅವರಿಗೂ ತಮ್ಮ ಸಲಹೆ, ಸೂಚನೆಗಳನ್ನು ಸರ್ಕಾರದ ಮುಂದಿಡುವ ಸಂಪೂರ್ಣ ಹಕ್ಕು ಇದೆ. ಹಾಗಾಗಿ, ಧರ್ಮಗುರುಗಳು ಸರ್ಕಾರಕ್ಕೆ ಕೇವಲ ಸಲಹೆಯನ್ನಿತ್ತರೆ ಒಳಿತು. ಅದನ್ನು ಬಿಟ್ಟು, ಪಟ್ಟು ಹಿಡಿದು ಕೇವಲ ಒಂದು ವರ್ಗಕ್ಕೆ, ಜಾತಿಗೆ ಸೀಮಿತರಾಗಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ.

ಮುಹಮ್ಮದ್ ಯೂನುಸ್ ಸಾರಾವಾನ್, ಮುಧೋಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.