ADVERTISEMENT

ವಾಚಕರ ವಾಣಿ: ಕದನದ ಬಿಸಿ ವಿದ್ಯಾರ್ಥಿಗಳಿಗೆ ತಟ್ಟದಿರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಫೆಬ್ರುವರಿ 2022, 19:30 IST
Last Updated 25 ಫೆಬ್ರುವರಿ 2022, 19:30 IST

ಭಾರತದಲ್ಲಿ ವ್ಯೆದ್ಯಕೀಯ ಶಿಕ್ಷಣ ದುಬಾರಿ. ‘ನೀಟ್’ನಲ್ಲಿ ಕನಿಷ್ಠ ಶೇ 90ರಷ್ಟು ಅಂಕ ಪಡೆದವರಿಗೂ ಸರ್ಕಾರಿ ಸೀಟು ಲಭ್ಯವಾಗುವುದು ಕಷ್ಟವಿದೆ. ಇನ್ನು ಖಾಸಗಿ ವ್ಯೆದ್ಯಕೀಯ ಕಾಲೇಜುಗಳಲ್ಲಿ ಶುಲ್ಕ ಅತ್ಯಂತ ದುಬಾರಿಯಾಗಿದೆ. ಇದರ ಪ್ರಯೋಜನವನ್ನು ಹಳೆಯ ಸೋವಿಯತ್ ದೇಶಗಳಾದ ರಷ್ಯಾ, ಉಕ್ರೇನ್, ಜಾರ್ಜಿಯಾ, ಬೆಲಾರಸ್, ಉಜ್ಬೇಕಿಸ್ತಾನ, ಆರ್ಮೇನಿಯಾ, ಕಜಕಸ್ತಾನ್ ಮುಂತಾದ ದೇಶಗಳು ಪಡೆದುಕೊಳ್ಳಲು ಆರಂಭಿಸಿದವು.

ಈ ದೇಶಗಳ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್‌ ವ್ಯಾಸಂಗ 5-6 ವರ್ಷಗಳಾಗಿದ್ದು, ಹಾಸ್ಟೆಲ್- ಊಟೋಪಚಾರದ ವ್ಯವಸ್ಥೆ ಇರುತ್ತದೆ. ಯಾವುದೇ ಭಾರತೀಯ ವಿದ್ಯಾರ್ಥಿಗೆ ಅಲ್ಲಿ ಶಿಕ್ಷಣ ಪಡೆಯುವುದೆಂದರೆ ಅದೊಂದು ಹೆಮ್ಮೆಯ ಸಂಗತಿ. ಪಿಯು ಪರೀಕ್ಷೆಗಳಲ್ಲಿ ಶೇ 50ರಷ್ಟು ಅಂಕ ಪಡೆದವರಿಗೂ ಅಲ್ಲಿ ಪ್ರವೇಶ ಇದೆ. ₹ 15 ಲಕ್ಷದಿಂದ 35 ಲಕ್ಷದವರೆಗೆ ಅಲ್ಲಿಯ ಮೆಡಿಕಲ್ ಕಾಲೇಜುಗಳು ಶುಲ್ಕ ಪಡೆಯುತ್ತವೆ. ಅದರಲ್ಲಿ ಊಟ, ವಸತಿ ಸೌಲಭ್ಯವೂ ಇರುತ್ತದೆ. ಹೊರ ದೇಶಗಳಲ್ಲಿ ವ್ಯೆದ್ಯಕೀಯ ಶಿಕ್ಷಣ ಪಡೆಯುವ ಇಚ್ಛೆಯುಳ್ಳ ವಿದ್ಯಾರ್ಥಿಗಳಿಗೆ ಇವು ತುಂಬಾ ಆಶಾದಾಯಕ ಸಂಗತಿಗಳು. ಅದಕ್ಕಾಗಿ ರಷ್ಯಾ ಮತ್ತು ಉಕ್ರೇನ್‌ನಲ್ಲಿ ಅಂದಾಜು ಹತ್ತು ಸಾವಿರ ಭಾರತೀಯ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಅಂದಾಜಿದೆ. ಹಳೆಯ ಎಲ್ಲ ಸೋವಿಯತ್ ರಾಷ್ಟ್ರಗಳಲ್ಲಿ ಅಂದಾಜು 25 ಸಾವಿರದಿಂದ 30 ಸಾವಿರ ಭಾರತೀಯ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಅದೇನೇ ಇದ್ದರೂ, ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದಾಗಿ, ಅಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳು ತೊಂದರೆ ಅನುಭವಿಸದೆ ಸುಖವಾಗಿ ನಮ್ಮ ದೇಶಕ್ಕೆ ವಾಪಸಾಗುವಂತಾಗಲಿ.

-ಚಂದ್ರಕಾಂತ ನಾಮಧಾರಿ, ಅಂಕೋಲಾ, ಉತ್ತರ ಕನ್ನಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.