ADVERTISEMENT

ವೈದ್ಯ ಸಾಹಿತ್ಯ: ಸ್ಮರಿಸಬೇಕಾದ ಮತ್ತೊಬ್ಬ ಮಹನೀಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 20:00 IST
Last Updated 1 ನವೆಂಬರ್ 2022, 20:00 IST

‘ಕನ್ನಡದಲ್ಲಿ ವೈದ್ಯ ಶಿಕ್ಷಣದ ಸವಾಲು’ ಎಂಬ ಶೀರ್ಷಿಕೆಯ ಟಿ.ಆರ್.ಅನಂತರಾಮು ಅವರ ಲೇಖನದಲ್ಲಿ (ಪ್ರ.ವಾ.., ಜ. 1) ಡಾ.ಪಿ.ಎಸ್.ಶಂಕರ್‌, ಡಾ.ಡಿ.ಶಿವಪ್ಪ ಅವರನ್ನು ನೆನೆದಿರುವುದು ಸರಿಯಾಗಿದೆ. ವೈದ್ಯ ಸಾಹಿತ್ಯಕ್ಕೆ ಡಾ.ಸ.ಜ.ನಾಗಲೋಟಿಮಠ ಅವರ ಕೊಡುಗೆಯೂ ಗಮನಾರ್ಹವಾದುದು. ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 40ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಈ ವಿಷಯದಲ್ಲಿ ಬರೆಯುವಂತೆ ಹಲವರನ್ನು ಪ್ರೇರೆಪಿಸಿದ್ದಾರೆ. ವೈದ್ಯಕೀಯ ವಿಷಯದ ಮೇಲಿನ ಅವರ ಭಾಷಣಗಳು ಪರಿಣಾಮಕಾರಿ ಆಗಿರುತ್ತಿದ್ದವು.

-ಜಯವಂತ ಕಾಡದೇವರ, ಬನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT