ADVERTISEMENT

ಬಿರುಕು ಮೂಡಿಸುವ ಪ್ರತಿಮೆಗಳೇಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಮೇ 2020, 19:45 IST
Last Updated 26 ಮೇ 2020, 19:45 IST

ಬೀದರ್‌ ಜಿಲ್ಲೆಯ ಮೆಹಕರ ಗ್ರಾಮದಲ್ಲಿ ಹಿಂದೆ ‍ಪ್ರತಿಮೆಗಳ ಹೆಸರಿನಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ತಪ್ಪಿಸಲು, ಅಲ್ಲಿದ್ದ 22 ಪ್ರತಿಮೆಗಳನ್ನು ತೆಗೆಸಲು ಶ್ರಮಿಸಿದ ಮೆಹಕರ ಮಠದ ಶ್ರೀಗಳ ಕಾರ್ಯ ಪ್ರಶಂಸನೀಯವಾದುದು. ಇತ್ತೀಚೆಗೆ ಸಣ್ಣ ಸಣ್ಣ ಹಳ್ಳಿಗಳಲ್ಲೂ ಸ್ಥಾಪನೆಗೊಳ್ಳುತ್ತಿರುವ ಹತ್ತಾರು ಪ್ರತಿಮೆಗಳು, ಜಾತಿ ಮತ್ತು ಧರ್ಮ ಸಂಘರ್ಷಗಳಿಗೆ ಕಾರಣವಾಗಿ, ಹಳ್ಳಿಯ ಸಾಮರಸ್ಯದ ಬದುಕಿಗೆ ಧಕ್ಕೆ ತರುತ್ತಿವೆ. ಜೊತೆಗೆ, ಜಾತಿಯ ನೆಲೆಯಲ್ಲಿ ಮಹಾತ್ಮರ ಜಯಂತಿಗಳನ್ನು ಆಚರಿಸುವ ಮೂಲಕ, ಅವರ ಆದರ್ಶ, ನಂಬಿಕೆ ಹಾಗೂ ತಾತ್ವಿಕ ನೆಲೆಗಟ್ಟುಗಳನ್ನೇ ನೆಲಸಮ ಮಾಡುವ ಪ್ರಯತ್ನ ಕಳವಳಕಾರಿ.

ಒಂದಾಗಿ ಚೆಂದಾಗಿ ಬದುಕುವ, ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸದಿಂದ ಕೂಡಿರುವ ಮನಸ್ಸುಗಳ ನಡುವೆ ಬಿರುಕು ಮೂಡಿಸುವುದಕ್ಕೆ ಪರೋಕ್ಷವಾಗಿ ‍ಪ್ರತಿಮೆಗಳು ಕಾರಣ ಎನ್ನುವುದಾದರೆ ಅವು ನಮಗೇಕೆ ಬೇಕು? ಮಹಾತ್ಮರ ಆದರ್ಶಗಳನ್ನು ನೆನೆಯುವುದಾದರೆ, ಪ್ರತಿಯೊಬ್ಬರ ಮನೆಯ ದೇವರ ಕೋಣೆಯಲ್ಲಿ ಅವರ ಪ್ರತಿಮೆಗಳನ್ನು ಇಟ್ಟು ಪ್ರತಿನಿತ್ಯವೂ ಪೂಜೆ ಮಾಡಲಿ.

ಡಿ.ರಾಮಣ್ಣ ಅಲಮರ್ಸಿಕೇರಿ, ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.