ADVERTISEMENT

ತಮಿಳುನಾಡಿಗೆ ಮನವರಿಕೆ ಮಾಡಿಕೊಡುತ್ತಿಲ್ಲ ಏಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಜನವರಿ 2019, 20:15 IST
Last Updated 13 ಜನವರಿ 2019, 20:15 IST

ಕರ್ನಾಟಕದ ಉದ್ದೇಶಿತ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಅವರಿಂದ ಇಂತಹ ಪ್ರತಿಕ್ರಿಯೆ ಸಹಜ ಮತ್ತು ಸಾಮಾನ್ಯ. ಆದರೆ, ಹೊಗೇನಕಲ್‌ ಬಳಿ ಕುಡಿಯುವ ನೀರಿಗೆಂದು ತಮಿಳುನಾಡು ನಿರ್ಮಿಸಿಕೊಂಡ ಅಣೆಕಟ್ಟು ಈಗ ನೀರಾವರಿ ಉದ್ದೇಶಕ್ಕೂ ಬಳಕೆ ಆಗುತ್ತಿದೆ. ಅದಕ್ಕೆ ನಾವು ತಗಾದೆ ತೆಗೆದಿಲ್ಲ. ಈ ವಿಷಯವನ್ನು ನಮ್ಮ ನೀರಾವರಿ ತಜ್ಞರಾಗಲೀ ಕಾನೂನು ತಜ್ಞರಾಗಲೀತಮಿಳುನಾಡಿಗೆ ಏಕೆ ಮನವರಿಕೆ ಮಾಡಿಕೊಡುತ್ತಿಲ್ಲ?

ನಮ್ಮ ದೇಶಕ್ಕೆ ನೆರೆ ರಾಷ್ಟ್ರಗಳಿಂದ ಕಿರುಕುಳ ಆಗುತ್ತಿರುವಂತೆಯೇ ನಮ್ಮ ರಾಜ್ಯಕ್ಕೆ ನೆರೆ ರಾಜ್ಯಗಳಿಂದ ಯಾವುದಾದರೂ ಒಂದು ಕಿರಿಕಿರಿ ಇದ್ದೇ ಇರುತ್ತದೆ. ಇದಕ್ಕೆಲ್ಲ ಪ್ರಮುಖ ಕಾರಣ ನಮ್ಮ ರಾಜಕಾರಣಿಗಳು. ಅವರಿಗೆ ರಾಜ್ಯದ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಮತ್ತು ಸ್ವಂತ ಹಿತಾಸಕ್ತಿ ಮುಖ್ಯವಾಗಿದೆ.ಜತೆಗೆ, ಕರ್ನಾಟಕದ ಹಿತರಕ್ಷಣೆ ಬಗ್ಗೆ ಆಸ್ಥೆಯಿಲ್ಲದ ಐ.ಎ.ಎಸ್‌. ಅಧಿಕಾರಿಗಳ ದಂಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT