‘ವಾಸ್ತುಶಿಲ್ಪದ ತೊಟ್ಟಿಲು’ ಎಂದೇ ಪ್ರಸಿದ್ಧಿ ಪಡೆದಿರುವ ಚಾಲುಕ್ಯರ ಕಾಲದ ಐಹೊಳೆಯ ಸ್ಮಾರಕವನ್ನು ಕಳೆದ ವರ್ಷ ನೋಡಲು ಹೋಗಿದ್ದಾಗ, ಮನಸ್ಸಿಗೆ ತುಂಬಾ ನೋವಾಗಿತ್ತು. ಕಾರಣ, ಸ್ಮಾರಕದ ಆವರಣದಲ್ಲಿ ಎಮ್ಮೆ, ದನ-ಕರು, ಕುರಿ-ಕೋಳಿ, ತಿಪ್ಪೆ, ಕೊಳಕು ತುಂಬಿ ತುಳುಕುತ್ತಿತ್ತು.
ಈಗ ಆ ಸ್ಮಾರಕದ ಸಂರಕ್ಷಣೆಗಾಗಿ ಅಲ್ಲಿನ ಜನವಸತಿಯನ್ನು ಸ್ಥಳಾಂತರಿಸಲು ಕ್ರಮ ಕೈಗೊಂಡಿರುವುದಾಗಿ ವರದಿಯಾಗಿದೆ (ಪ್ರ.ವಾ., ಅ. 10). ಇದು ಸಮಾಧಾನದ ಸಂಗತಿ. ಆದಷ್ಟು ಬೇಗ ಈ ಕೆಲಸ ಪೂರ್ಣಗೊಳ್ಳಬೇಕು.
ಇದೊಂದೇ ಅಲ್ಲ, ಬಹುತೇಕ ಎಲ್ಲಾ ಕಡೆ ಐತಿಹಾಸಿಕ ಸ್ಮಾರಕಗಳ ಜಾಗ ಅತಿಕ್ರಮಣಕ್ಕೆ ಒಳಗಾಗಿದೆ. ಇಂಥ ಒತ್ತುವರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ ಇಂಥ ಪ್ರದೇಶಗಳಿಗೆ ಹೋಗುವ ರಸ್ತೆಯನ್ನು ದುರಸ್ತಿಪಡಿಸುವ, ಅಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲೂ ಕೆಲಸಗಳಾಗಬೇಕು.
ಕೆ.ಸಿ. ರತ್ನಶ್ರೀ ಶ್ರೀಧರ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.