ADVERTISEMENT

ವಾಚಕರ ವಾಣಿ: ಫೋನ್‌ ದುರ್ಬಳಕೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 19:39 IST
Last Updated 19 ಅಕ್ಟೋಬರ್ 2020, 19:39 IST

ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಉಚಿತವಾಗಿ ಪಾಠ ಮಾಡುತ್ತಿರುವ ಬೆಂಗಳೂರಿನ ಬದರಿನಾಥ ವಿಠ್ಠಲ್– ಇಂದಿರಾ ದಂಪತಿಯ ಸೇವಾಕಾರ್ಯಕ್ಕೆ ಹಲವರು ಕೈಜೋಡಿಸಿ, ಮಕ್ಕಳಿಗೆ ಮೊಬೈಲ್ ಫೋನ್‌ ಮತ್ತು ಪಠ್ಯಪುಸ್ತಕ ಕೊಡಿಸುತ್ತಿರುವುದನ್ನು ತಿಳಿದು ಸಂತೋಷವಾಯಿತು (ಪ್ರ.ವಾ., ಅ. 19). ಆದರೆ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮಾತ್ರ ಫೋನ್‌ಗಳನ್ನು ಉಪಯೋಗಿಸಬೇಕು. ಅದನ್ನು ಬಿಟ್ಟು, ಫೋನ್‌ನಲ್ಲಿ ದೊರೆಯುವ ಇತರ ಕಾರ್ಯಕ್ರಮಗಳಿಗೇ ಅತಿಯಾಗಿ ಜೋತುಬಿದ್ದರೆ ಪರಿಣಾಮ ವಿಪರೀತಕ್ಕೆ ಇಟ್ಟುಕೊಳ್ಳುತ್ತದೆ. ಇದರಿಂದ ಪೋಷಕರಿಗೆ, ಪಾಠ ಕಲಿಸುತ್ತಿರುವ ಬದರಿನಾಥ್– ಇಂದಿರಾ ದಂಪತಿಗೆ, ಅವರ ಜೊತೆ ಕೈಜೋಡಿಸಿರುವದಾನಿಗಳೆಲ್ಲರಿಗೂ ಬೇಸರವಾಗುತ್ತದೆ. ಇದನ್ನು ಮಕ್ಕಳು ಅರಿತು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು.

-ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT