ADVERTISEMENT

ಹಣ ವಸೂಲು ಮಾಡಬಹುದು; ಆದರೆ...

ವಸುಂಧರಾ ಕೆ.ಎಂ.  ಬೆಂಗಳೂರು
Published 18 ಫೆಬ್ರುವರಿ 2019, 20:15 IST
Last Updated 18 ಫೆಬ್ರುವರಿ 2019, 20:15 IST

ವಿಕಾಸಸೌಧ ನಿರ್ಮಾಣವಾಗಿ 15 ವರ್ಷ ಕಳೆದಿಲ್ಲ. ಆಗಲೇ ಅದರ ಗೋಡೆಗಳಲ್ಲಿ ಬಿರುಕು, ತೇವಾಂಶ ಕಂಡಿರುವ ಬಗ್ಗೆ ಲೋಕಾಯುಕ್ತ ಸಂಸ್ಥೆ ತನಿಖಾ ವರದಿ ನೀಡಿದೆ (ಪ್ರ.ವಾ., ಫೆ. 18). ಸರ್ಕಾರಿ ಸೇವೆಯಲ್ಲಿರುವ ಎಂಜಿನಿಯರುಗಳೇ ಇಂಥ ಹಳವಂಡದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಸರಿಯಷ್ಟೆ.

ಈ ವರದಿಯನ್ನು ನೋಡಿದಾಕ್ಷಣ, ಹಲವು ಬಗೆಯ ನೈಸರ್ಗಿಕ ಏರುಪೇರುಗಳಿಗೆ ತಮ್ಮನ್ನು ಒಡ್ಡಿಕೊಂಡೂ ತಮ್ಮ ಅಚಲ ಭದ್ರತೆ, ಮನೋಜ್ಞ ಕಲಾತ್ಮಕತೆಯನ್ನು ಸುಸ್ಥಿತಿಯಲ್ಲಿ ಉಳಿಸಿಕೊಂಡು ಶತಮಾನಗಳಿಂದ ಜಗತ್ತಿನ ಮನೆಮಾತಾಗಿರುವ ವಾಸ್ತುಶಿಲ್ಪ, ಶಿಲ್ಪಕಲಾ ವೈಭವದ ನಾಡಿನವರಾ ನಾವು ಎಂದು ಯೋಚಿಸುವಂತಾಯಿತು. ಕಳಪೆ ಕಾಮಗಾರಿಯಿಂದ ಆಗಿರುವ ನಷ್ಟ, ಅಸಮರ್ಪಕ ಲೆಕ್ಕಗಳಿಗೆ ಪಾವತಿಸಿರಬಹುದಾದ ಹೆಚ್ಚುವರಿ ಹಣವನ್ನು ಹೇಗಾದರೂ ವಸೂಲಿ ಮಾಡಬಹುದು. ಆದರೆ, ಆಧುನಿಕ ಯುಗದ ಹೊಸ ಆವಿಷ್ಕಾರ, ತಾಂತ್ರಿಕ ನೈಪುಣ್ಯವನ್ನು ನಿರ್ಲಕ್ಷಿಸಿ ನಾಡಿಗೆ ಮಾಡಿರುವ ದ್ರೋಹವನ್ನು ಹೇಗೆ ಅಲಕ್ಷಿಸುವುದು? ಬೇಲಿಯೇ ಎದ್ದು ಹೊಲ ಮೇಯ್ದರೆ ಯಾರು ಹೊಣೆಗಾರರು...?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT