ADVERTISEMENT

ಕಡ್ಡಾಯ ಶಿಕ್ಷಣಕ್ಕೆ ವಿರುದ್ಧದ ನಡೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 19:31 IST
Last Updated 9 ಜುಲೈ 2020, 19:31 IST

ಶಾಲಾ ಮಕ್ಕಳಿಗೆ ಆನ್‍ಲೈನ್ ಪಾಠಕ್ಕೆ ಸಂಬಂಧಿಸಿದಂತೆ ಪ್ರೊ. ಎಂ.ಕೆ.ಶ್ರೀಧರ್ ನೇತೃತ್ವದ ಸಮಿತಿ ನೀಡಿರುವ ವರದಿ ಅಮಾನವೀಯವಾಗಿದೆ. ಎಲ್‌ಕೆಜಿ ಮಕ್ಕಳು ಪೋಷಕರ ಅಪ್ಪುಗೆ, ತಾಯ್ತನ, ಅನನ್ಯತೆಯ ನಡುವೆ ಬೆಳೆಯಬೇಕೆಂದು ಎಲ್ಲಾ ಆಪ್ತ ಸಮಾಲೋಚಕರು, ಮನೋತಜ್ಞರು ಹೇಳುತ್ತಲೇ ಬಂದಿದ್ದಾರೆ. ಆದರೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವೆಂಬುದು ಮಕ್ಕಳಾದ ಮಾತ್ರಕ್ಕೆ ಎಲ್ಲರಿಗೂ ಸಲ್ಲುವಂತಹದ್ದಲ್ಲ ಎಂಬುದನ್ನು ನಡವಳಿಕೆಯ ಮೂಲಕ ತೋರ್ಪಡಿಸಿರುವ ಸಮಿತಿಯು ಸಮಾನತೆಯ ಮೂಲಭೂತ ಶಿಕ್ಷಣದ ಹಕ್ಕಿಗೆ ಚ್ಯುತಿ ತಂದಿದೆ.

ಈ ಸಮಿತಿಯಲ್ಲಿ ಗ್ರಾಮೀಣ, ಆದಿವಾಸಿ, ಕೊಳೆಗೇರಿಯ ಪರಿಸರದಲ್ಲಿ ಶಿಕ್ಷಣಕ್ಕಾಗಿ ಕೆಲಸ ಮಾಡಿದ ಸದಸ್ಯರೇ ಇರಲಿಲ್ಲ. ಹಾಗಾಗಿಯೇ ಆನ್‍ಲೈನ್ ಶಿಕ್ಷಣಕ್ಕೆ ಬೆನ್ನುತಟ್ಟಿ ನಿಲ್ಲಲಾಗಿದೆ. ಇಂತಹ ವ್ಯವಸ್ಥೆಯು ನಗರ ಮಟ್ಟಕ್ಕೆ ಸೀಮಿತವೇ ಹೊರತು, ಹಿಂದುಳಿದ ಪರಿಸರದ ಬಡ ಜನರಿಗೆ ಸಲ್ಲುವುದಿಲ್ಲ. ಇದರಿಂದಾಗಿ ಸಮಾನತೆಯ ವಿಚಾರವನ್ನು ಗಾಳಿಗೆ ತೂರಿದಂತಾಗುತ್ತದೆ. ಸಮ ಸಮಾಜದ ಸಮನ್ವಯವನ್ನು ಕಾಯುವ ಶಿಕ್ಷಣವು ಮೂಲಭೂತ ಹಕ್ಕಾಗಿರುವ ಸಂದರ್ಭದಲ್ಲಿ, ಬಹಳಷ್ಟು ಗ್ರಾಮೀಣ ಮಕ್ಕಳನ್ನು ಹಾಗೂ ನಗರದ ಬಡವರನ್ನು ಆನ್‍ಲೈನ್ ಶಿಕ್ಷಣವು ಹೊರಗಿಡುತ್ತದೆ.

- ಪರಶುರಾಮ ಎಂ.ಎಲ್., ಸ್ಟ್ಯಾನ್ಲಿ ಕೆ.ವಿ.,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.