ADVERTISEMENT

ಹಿರಿಯರ ಸಂಸ್ಕೃತಿಗೆ ವಿರುದ್ಧದ ನಡೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 16:33 IST
Last Updated 21 ಅಕ್ಟೋಬರ್ 2021, 16:33 IST

‘ಗಾಜು ಒಡೆಯುವ ಮುನ್ನ...’ ಎಂಬ ಡಾ. ಮುರಳೀಧರ ಕಿರಣಕೆರೆ ಅವರ ಲೇಖನ (ಸಂಗತ, ಅ. 19) ಅರ್ಥಪೂರ್ಣ. ಇಂದಿನ ‌ಯುವಕರ ಮನಸ್ಸು ಅದೆಷ್ಟು ಹದಗೆಟ್ಟಿದೆಯೆಂದರೆ, ತಾವು ಕುಡಿದ‌ ಮದ್ಯದ ಖಾಲಿ ಬಾಟಲಿಗಳನ್ನು ಹಾಗೇ ಬಿಸಾಡದೆ ಅದನ್ನು ಒಡೆದು ಚೂರು ಚೂರು ಮಾಡಿ ಜನ ಓಡಾಡುವ ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ.

ಈ ಮೊದಲು ಖಾಲಿ ಬಾಟಲಿಗಳನ್ನು ಗುಜರಿ ಅಂಗಡಿಯವರು ಹಣಕ್ಕೆ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಗುಜರಿಯಲ್ಲಿ ಅವುಗಳನ್ನು ಖರೀದಿಸುತ್ತಿಲ್ಲ. ಹಾಗಾಗಿ ಅವನ್ನು ಆಯುವವರೂ ಇಲ್ಲ. ಓಡಾಡುವ ಹಾದಿಯಲ್ಲಿ ಮುಳ್ಳು ಹಾಕಬಾರದು ಎಂಬುದು ನಮ್ಮ ಹಿರಿಯರ ಸಂಸ್ಕೃತಿ. ಆದರೆ ಮುಂದೆ ಸತ್ಪ್ರಜೆಗಳಾಗಬೇಕಾದ ಯುವಶಕ್ತಿ ಇದಕ್ಕೆ ವಿರುದ್ಧವಾದ ನಡೆಯನ್ನು ರೂಢಿಸಿಕೊಳ್ಳುತ್ತಿರುವುದು ದುರದೃಷ್ಟಕರ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಇಂತಹ ನಡೆ ಸಲ್ಲದು.

ಗೊಲ್ಲರಹಳ್ಳಿ ಮಂಜುನಾಥ್,ಹೊನ್ನಾಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.