ADVERTISEMENT

ವಾಚಕರ ವಾಣಿ | ಟೀಕೆ ಸಕಾಲಿಕ; ಆತ್ಮವಿಮರ್ಶೆಗೆ ಸಕಾಲ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 19:30 IST
Last Updated 12 ಆಗಸ್ಟ್ 2020, 19:30 IST

ಬಿಎಸ್ಎನ್ಎಲ್ ನೌಕರರ ಬಗ್ಗೆ ಸಂಸದ ಅನಂತಕುಮಾರ ಹೆಗೆಡೆ ಅವರ ಕಟು ಟೀಕೆ ಸಕಾಲಿಕವಾಗಿದ್ದು, ನೌಕರರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಇಷ್ಟು ದಿನ ನಿಷ್ಪ್ರಯೋಜಕ, ನಿರುಪಯೋಗಿ ನೌಕರರ ಜಾತ್ರೆ ನಡೆಸಿ, ಬರೀ ರಾಜಕೀಯ, ಸಂಬಳ ಸವಲತ್ತುಗಳಿಗೆ ಭಯಂಕರ ಹೋರಾಟ ನಡೆಸಿದವು. ಬಿಎಸ್ಎನ್ಎಲ್ ಉಳಿಸಬೇಕು, ನಾವು ಉಣ್ಣುವ ಅನ್ನದ ಋಣಕ್ಕಾದರೂ ಬಳಕೆದಾರರಿಗೆ ಸೂಕ್ತ ಸಕಾಲಿಕ ಸೇವೆ ನೀಡಬೇಕು ಎಂಬ ಮನೋಭಾವ ಕಡೆಗೂ ಬರಲೇ ಇಲ್ಲ.

ಕೇಂದ್ರ ಸರ್ಕಾರ ಹಣ ಕೊಡುವುದಿಲ್ಲ, 4ಜಿ ಕೊಡುವುದಿಲ್ಲ ಎಂದೆಲ್ಲ ಸಬೂಬು ಹೇಳುವುದು ಸರಿಯಲ್ಲ. ಏಕೆಂದರೆ ಬೆಳೆಯುವ ಯೋಗ್ಯತೆ ನಮ್ಮಲ್ಲಿಯೇ ಇಲ್ಲವಾಗಿದೆ. ಕೈ ತುಂಬಾ ಸಂಬಳ ಬರುವಾಗ ಯಾಕೆ ದುಡಿಯಬೇಕು ಎಂಬ ಧೋರಣೆ ಹಲವರಲ್ಲಿದೆ. ನಾನೂ ಒಬ್ಬ ನಿವೃತ್ತ ಬಿಎಸ್ಎನ್ಎಲ್ ನೌಕರನಾಗಿದ್ದು, ನನಗೆ ಅನ್ನ ನೀಡಿದ ಈ ಸಂಸ್ಥೆಯ ಈಗಿನ ಸ್ಥಿತಿ ನೋಡಿ ಮರುಕವಾಗುತ್ತಿದೆ.

-ಶಾಂತವೀರ ಎಸ್., ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.