ADVERTISEMENT

ವಾಚಕರ ವಾಣಿ: ರಸಬಾಳೆಯ ಮಹತ್ವ ಅರಿಯಿರಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 17:00 IST
Last Updated 3 ಜನವರಿ 2021, 17:00 IST

ಅಪರೂಪದ ತಳಿಯಾಗಿದ್ದು ಭೌಗೋಳಿಕ ಮಾನ್ಯತೆ ಪಡೆದಿದ್ದರೂ ಬೆಳೆ ಪ್ರಮಾಣ ಕುಂಠಿತವಾಗುತ್ತಿರುವ ಜನಪ್ರಿಯ ‘ನಂಜನಗೂಡು ರಸಬಾಳೆ’ಯನ್ನು ಬೆಳೆಯಲು ರೈತರನ್ನು ಉತ್ತೇಜಿಸುವಂತೆ ತೋಟಗಾರಿಕಾ ಅಧಿಕಾರಿಗಳಿಗೆ ಮೈಸೂರಿನ ಜಿಲ್ಲಾಧಿಕಾರಿ ಸೂಚನೆ ಕೊಟ್ಟಿದ್ದಾರೆ. ನಂಜನಗೂಡು ತಾಲ್ಲೂಕಿನ ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿರುವ ದೇವರಸನಹಳ್ಳಿ ಎಂಬ ಗ್ರಾಮದಲ್ಲಿ ಮೊದಲು ಈ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಇದೀಗ ಈ ವಿಶೇಷ ರಸಬಾಳೆ ಬೆಳೆಯುವ ಪ್ರದೇಶದ ಪ್ರಮಾಣ ತೀರಾ ಕಡಿಮೆಯಾಗಲು ಏನು ಕಾರಣ, ಈ ಬೆಳೆಯನ್ನು ಹೆಚ್ಚಿನ ಪ್ರದೇಶಕ್ಕೆ ವಿಸ್ತರಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಗಂಭೀರವಾದ ಚಿಂತನೆ ನಡೆಯಬೇಕಾಗಿದೆ.

ಸರ್ಕಾರ ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಈ ತಳಿ ಉಳಿಯುವಂತೆ ಮಾಡಬಹುದು. ರಸಬಾಳೆಯ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದಿದ್ದರೆ ಅದು ಅಳಿದುಹೋಗುವ ಸಾಧ್ಯತೆಯೇ ಹೆಚ್ಚು. ಸ್ವಾದಿಷ್ಟ ಮತ್ತು ಪೋಷಕಾಂಶಯುಕ್ತವಾದ ಈ ಹಣ್ಣನ್ನು ಸಂರಕ್ಷಿಸಬೇಕಾದ ಅಗತ್ಯ ಇದೆ. ಈ ದಿಸೆಯಲ್ಲಿ ಸ್ಥಳೀಯ ಆಡಳಿತ ಹೆಚ್ಚು ಮುತುವರ್ಜಿ ವಹಿಸಲಿ.

–ಅನಿಲ್ ಕುಮಾರ್, ನಂಜನಗೂಡು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.