ADVERTISEMENT

ಪೌಷ್ಟಿಕಾಂಶದ ಕೊರತೆ ನೀಗುವ ಆಹಾರ ಬೇಕು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ನವೆಂಬರ್ 2019, 17:32 IST
Last Updated 20 ನವೆಂಬರ್ 2019, 17:32 IST

ರಾಜ್ಯದ ಶಾಲಾ ಮಕ್ಕಳಿಗೆ ಅಕ್ಷಯಪಾತ್ರೆ ಪ್ರತಿಷ್ಠಾನ ಸರಬರಾಜು ಮಾಡುತ್ತಿರುವ ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಇರುವುದಕ್ಕೆ ರಾಜ್ಯ ಸರ್ಕಾರ ವಿನಾಯಿತಿ ನೀಡಿರುವುದು (ಪ್ರ.ವಾ., ನ. 13) ಆತಂಕಕಾರಿ ಬೆಳವಣಿಗೆ.

ಈಗಾಗಲೇ ರಾಜ್ಯದ ಹಲವು ಸಂಘಟನೆಗಳು, ಆಹಾರ ತಜ್ಞರು, ಶಾಲಾ ಮಕ್ಕಳು, ಪೋಷಕರು ಈ ಕುರಿತು ಧ್ವನಿ ಎತ್ತಿದ್ದರೂ ಸರ್ಕಾರ ಈ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಹೇಳುವಂತೆ, ಮಕ್ಕಳಿಗೆ ಸಿಗಬೇಕಿರುವ ಪೌಷ್ಟಿಕಾಂಶಗಳನ್ನು ಅವರಿಗೆ ಒದಗಿಸುವ ಊಟದಲ್ಲಿ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ‘ಈರುಳ್ಳಿ, ಬೆಳ್ಳುಳ್ಳಿಯಲ್ಲಿ ಇರುವಷ್ಟೇ
ಪೌಷ್ಟಿಕಾಂಶ ಇರುವ ಸಾಮಗ್ರಿಗಳನ್ನು ಬಳಸಲಾಗುತ್ತಿದೆ’ ಎಂಬ ಪ್ರತಿಷ್ಠಾನದ ಹೇಳಿಕೆಗೆ ಓಗೊಟ್ಟಿರುವುದು ಸಮಂಜಸವಲ್ಲ.

ಈ ಬಿಸಿಯೂಟವನ್ನು ತಿನ್ನುತ್ತಿರುವ ಮಕ್ಕಳಲ್ಲಿ ಹೆಚ್ಚಿನವರು ಸಮಾಜದ ಅಂಚಿನ ಸಮುದಾಯ
ಗಳಿಂದ, ತಲೆತಲಾಂತರದಿಂದಲೂ ಅಸಮಾನತೆಯಿಂದ, ಅಪೌಷ್ಟಿಕಾಂಶದಿಂದ ಬಳಲುತ್ತಿರುವ ಕುಟುಂಬಗಳಿಂದ ಬಂದವರು ಮತ್ತು ಈರುಳ್ಳಿ, ಬೆಳ್ಳುಳ್ಳಿ ಬಳಸುವವರು. ಸಣ್ಣ ಸಮುದಾಯದ ಇಷ್ಟಾನಿಷ್ಟಗಳನ್ನು ಪರಿಗಣಿಸಿ, ಉಳಿದವರ ಆಹಾರ ಅಭ್ಯಾಸವನ್ನು ಕಡೆಗಣಿಸುವುದು ಸರಿಯಲ್ಲ. ಇಂತಹ ಹುನ್ನಾರಗಳಿಗೆ ಸರ್ಕಾರ ಮರುಳಾಗಬಾರದು. ಮಕ್ಕಳಿಗೆ ಅಗತ್ಯವಿರುವ, ಪೌಷ್ಟಿಕಾಂಶದ ಕೊರತೆ ನೀಗಿಸುವ ಆಹಾರವನ್ನು ಸರಬರಾಜು ಮಾಡುವ ಸಂಸ್ಥೆಗಳಿಗೆ ಬಿಸಿಯೂಟದ ಜವಾಬ್ದಾರಿಯನ್ನು ವಹಿಸಬೇಕು.

ADVERTISEMENT

ಹುಲಿಕುಂಟೆ ಮೂರ್ತಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.