ADVERTISEMENT

ಜಾತ್ರೆ ನಿಷೇಧ ಬೇಡ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 19:30 IST
Last Updated 20 ಜನವರಿ 2021, 19:30 IST

ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಈ ಬಾರಿಯ ಬನದ ಹುಣ್ಣಿಮೆ ಜಾತ್ರೆಯನ್ನು ಕೋವಿಡ್– 19 ಕಾರಣದಿಂದ ರದ್ದು ಮಾಡಿರುವುದನ್ನು (ಪ್ರ.,ವಾ., ಜ. 19) ತಿಳಿದು ಅಚ್ಚರಿಯಾಯಿತು. ಕೊರೊನಾ ವೈರಾಣುವಿನ ಭಯದಲ್ಲಿ ಅನೇಕ ಜಾತ್ರೆಗಳು ಈಗಾಗಲೇ ರದ್ದಾಗಿವೆ. ಆದರೆ ಸಹಸ್ರಾರು ಜನರನ್ನು ಒಳಗೊಂಡ ವಿವಿಧ ರಾಜಕೀಯ ಪಕ್ಷಗಳ ಸಮಾವೇಶಗಳು ಎಗ್ಗಿಲ್ಲದೇ ನಡೆಯುತ್ತಿವೆ. ಜಾತಿ ಸಮಾವೇಶಗಳು, ಪಾದಯಾತ್ರೆಗಳಲ್ಲಿ ಜನ ನಿರಾತಂಕವಾಗಿ ಭಾಗವಹಿಸುತ್ತಿದ್ದಾರೆ. ಬಸ್ ನಿಲ್ದಾಣಗಳು, ಬಸ್‌ಗಳು, ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿವೆ. ದೆಹಲಿಯಲ್ಲಿ ಹಲವಾರು ದಿನಗಳಿಂದ ನಡೆಯುತ್ತಿರುವ ರೈತ ಚಳವಳಿಯಲ್ಲಿ ಸಾವಿರಾರು ಜನ ಭಾಗವಹಿಸಿದ್ದಾರೆ.

ಬಹುತೇಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ದೇವರ ದರ್ಶನಕ್ಕಾಗಿ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ, ಗುಂಪುಗೂಡುತ್ತಿದ್ದಾರೆ. ಇವೆಲ್ಲದರ ನಡುವೆ ಗ್ರಾಮ ಪಂಚಾಯಿತಿ ಚುನಾವಣೆಗಳು, ವಿಜಯೋತ್ಸವಗಳು ಕೊರೊನಾ ಭಯವಿಲ್ಲದೆ ನಡೆದಿವೆ. ಆದರೆ ಇಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ಜಾತ್ರೆಗಳನ್ನು ನಿಷೇಧಿಸುವುದು ಮಾತ್ರ ಅಚ್ಚರಿ ಮೂಡಿಸುತ್ತದೆ. ಜನರ ನಂಬಿಕೆಯ ಪ್ರತೀಕವಾಗಿರುವ ಜಾತ್ರೆಗಳನ್ನು ನಿಷೇಧಿಸುವ ಬದಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅನುಮತಿ ನೀಡಲಿ.

ಅಶೋಕ ಓಜಿನಹಳ್ಳಿ,ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.