ADVERTISEMENT

‘ಆಪರೇಷನ್ ಕಮಲ’ಕ್ಕೆ ಮದ್ದಿಲ್ಲವೇ?

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 19:31 IST
Last Updated 10 ಮಾರ್ಚ್ 2020, 19:31 IST

ಕರ್ನಾಟಕದಲ್ಲಿ ‘ಆಪರೇಷನ್ ಕಮಲ’ದ ಹೆಸರಿನಲ್ಲಿ 17 ಶಾಸಕರು ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಗೆ ಕಾರಣರಾದರು. ಆಗಲೇ ನ್ಯಾಯಾಲಯವು ಇಂತಹ ಬೆಳವಣಿಗೆಗೆ ಸರಿಯಾದ ಮದ್ದು ಅರೆದಿದ್ದರೆ, ಮಧ್ಯಪ್ರದೇಶದಲ್ಲಿ ಕರ್ನಾಟಕದ ಮಾದರಿಯಲ್ಲಿ ಈಗ ನಡೆಯುತ್ತಿರುವ ‘ಆಪರೇಷನ್ ಕಮಲ’ದ ರಾಜಕೀಯ ಪ್ರಹಸನ ಮರುಕಳಿಸುತ್ತಿರಲಿಲ್ಲ. ಪ್ರಧಾನಿ ಸ್ಥಾನ ಉಳಿಸಿಕೊಳ್ಳಲು ಅಟಲ್‌ ಬಿಹಾರಿ ವಾಜಪೇಯಿಯವರು ಇಂತಹುದಕ್ಕೆ ಅವಕಾಶ ಕೊಡದೆ, ರಾಜೀನಾಮೆಯನ್ನೇ ಕೊಟ್ಟಂತಹ ಇತಿಹಾಸ ಇರುವ ಬಿಜೆಪಿ ಪಕ್ಷಕ್ಕೆ, ಇದರಿಂದ ಒಳ್ಳೆಯ ಹೆಸರಂತೂ ಬರುವುದಿಲ್ಲ. ಇದನ್ನು ಆ ಪಕ್ಷದ ನೇತಾರರು ಅರಿತರೆ ಒಳ್ಳೆಯದು.

-ಯಲುವಹಳ್ಳಿ ಸೊಣ್ಣೇಗೌಡ, ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT