ADVERTISEMENT

ಶಾಶ್ವತ ಪರಿಹಾರ ದೊರೆಯಲಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 20:01 IST
Last Updated 9 ಆಗಸ್ಟ್ 2019, 20:01 IST

ಪ್ರವಾಹ ಎದುರಾದ ಸಂದರ್ಭಗಳಲ್ಲಿ, ಮುಖ್ಯಮಂತ್ರಿಯಾದವರು ಸಾಮಾನ್ಯವಾಗಿ ವೈಮಾನಿಕ ಸಮೀಕ್ಷೆ ನಡೆಸುತ್ತಾರೆ. ಅಧಿಕಾರಿಗಳಿಂದ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆಯೂ ನಡೆಯುತ್ತದೆ. ಆದರೆ ಅಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಪ್ರವಾಹ ಇಳಿದು, ಹಳ್ಳಿಗಳು ಯಥಾಸ್ಥಿತಿಗೆ ಬಂದಾಗ ಅಲ್ಲಿಗೆ ಭೇಟಿ ನೀಡಿ ನಿಜಸ್ಥಿತಿ ಅರಿಯುವ, ಪರಿಹಾರೋಪಾಯಗಳನ್ನು ಶೋಧಿಸುವ ಗೋಜಿಗೂ ಯಾರೂ ಹೋಗುವುದಿಲ್ಲ.

ಮಳೆ ಹೆಚ್ಚಾದಾಗ ಅಥವಾ ಅಣೆಕಟ್ಟುಗಳಿಂದ ಹರಿದು ಬರುವ ನೀರಿನ ಪ್ರಮಾಣ ದಿಢೀರನೆ ಏರಿದಾಗ ಮತ್ತೆ ಅದೇ ಪ್ರವಾಹ ಸ್ಥಿತಿ. ಅದೇ ಬವಣೆ ಮರುಕಳಿಸುತ್ತದೆ. ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಗುರುತಿಸಬೇಕು. ಶಾಶ್ವತ ಪರಿಹಾರಕ್ಕೆ ಕ್ರಮ ಜರುಗಿಸಬೇಕು.

ಸಣ್ಣಮಾರಪ್ಪ,ಚಂಗಾವರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.