ADVERTISEMENT

ಶಸ್ತ್ರಚಿಕಿತ್ಸೆಗೆ ಅನುಮತಿ: ಮರುಪರಿಶೀಲಿಸಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 19:45 IST
Last Updated 22 ನವೆಂಬರ್ 2020, 19:45 IST

ತರಬೇತಿ ಪಡೆದು ಕೆಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು (ಪ್ರ.ವಾ., ನ. 22) ಸರಿಯಲ್ಲ. ನುರಿತ, ಅನುಭವಿ ವೈದ್ಯರು ಮಾಡುವ ಶಸ್ತ್ರಚಿಕಿತ್ಸೆಗಳಲ್ಲೇ ಹಲವು ಎಡವಟ್ಟುಗಳಾಗುತ್ತಿರುವುದನ್ನು (ಕತ್ತರಿ, ಬ್ಲೇಡು ದೇಹದಲ್ಲೇ ಬಿಟ್ಟು ಹೊಲಿಗೆ ಹಾಕಿದ ಉದಾಹರಣೆಗಳಿವೆ) ನೋಡುತ್ತಿರುತ್ತೇವೆ.

ಅಂತಹುದರಲ್ಲಿ ಗಿಡಮೂಲಿಕೆ ಔಷಧಿ ನೀಡುವ ವೈದ್ಯರಿಗೆ ತರಬೇತಿ ನೀಡಿ ಸಾಮಾನ್ಯ ಶಸ್ತ್ರಚಿಕಿತ್ಸೆ ನಡೆಸಲು ಅನುಮತಿಸುವುದನ್ನು ಭಾರತೀಯ ವೈದ್ಯಕೀಯ ಸಂಘ ಖಂಡಿಸಿರುವುದು ಸರಿಯಾಗಿಯೇ ಇದೆ. ಸರ್ಕಾರ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಲಿ.
-ಆರ್.ಟಿ.ವೆಂಕಟೇಶ್ ಬಾಬು,ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT