ADVERTISEMENT

ಪಕ್ಷಾಂತರ ನಿಷೇಧ ಕಾಯ್ದೆ ಬಲಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 18:04 IST
Last Updated 2 ನವೆಂಬರ್ 2018, 18:04 IST

ಇದೆಂಥ ರಾಜಕೀಯ! ಬೆಳಿಗ್ಗೆ ಒಂದು ಪಕ್ಷ, ಸಂಜೆ ಮತ್ತೊಂದು, ರಾತ್ರಿ ಮಗದೊಂದು ಪಕ್ಷ ಸೇರಿದರೂ ಟಿಕೆಟ್‌ ಕೊಟ್ಟುಬಿಡ್ತಾರೆ. ಗೌರವ, ನಾಚಿಕೆ ಎಂಬ ಪದಗಳ ಅರ್ಥ ತಿಳಿಯದ ರಾಜಕಾರಣಿಗಳ ನಡೆ ನೋಡಿ ಅಯ್ಯೋ ಅನಿಸುತ್ತದೆ! ರಾಜಕೀಯ ಇಷ್ಟೊಂದು ಹೊಲಸಾಗಬಾರದಾಗಿತ್ತು. ಯಾವ ಪಕ್ಷದಿಂದ ಸ್ಪರ್ಧಿಸಿ ಗೆದ್ದರೂ ಆ ಪಕ್ಷಕ್ಕೆ ಯಾವಾಗ ಕೈ ಕೊಡುತ್ತಾರೋ ಎಂಬುದು ಹೇಳಲಾಗದಂಥ ಪರಿಸ್ಥಿತಿ. ನಂಬಿಕೆ, ನಿಷ್ಠೆ, ವಿಶ್ವಾಸ ಎಂಬುದು ಮಾಯವಾಗಿ ಸ್ವಾರ್ಥವೇ ಮೆರೆದಾಡುತ್ತಿದೆ.

ವ್ಯಕ್ತಿಯೊಬ್ಬ ತನ್ನ ಪಕ್ಷವನ್ನು ತೊರೆದು ಇನ್ನೊಂದು ಪಕ್ಷವನ್ನು ಸೇರಿದ ಕೂಡಲೇ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡುವುದು, ಚುನಾವಣೆ ಸಮೀಪಿಸಿತು ಎನ್ನುವಾಗ ಆತ ಮರಳಿ ಮಾತೃ ಪಕ್ಷಕ್ಕೆ ಹಿಂದಿರುಗುವುದು... ಇವೆಲ್ಲ ಅಭಿವೃದ್ಧಿಗಾಗಿ ಅಲ್ಲವೇ ಅಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಇನ್ನೂ ಸ್ವಲ್ಪ ಕಠಿಣವಾಗಬೇಕು. ಮತದಾರನಿಗೆ ವಂಚಿಸುವ ಇಂಥ ಪ್ರಕ್ರಿಯೆಗೆ ಅಂತ್ಯ ಹಾಡಬೇಕು.

ಸಲೀಮ್ ಬೋಳಂಗಡಿ, ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.