ADVERTISEMENT

ಪಾಠ ಕಲಿಯುವ ಪ್ರಶ್ನೆಯೇ ಇಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಮಾರ್ಚ್ 2021, 19:30 IST
Last Updated 25 ಮಾರ್ಚ್ 2021, 19:30 IST

‘ಚೀನಾದಲ್ಲಿ ಗರೀಬಿ ಹಟಾವೊ’ ಕುರಿತು ವಸ್ತುನಿಷ್ಠವಾಗಿ ವಿವರಿಸಿರುವ (ಪ್ರ.ವಾ., ಮಾರ್ಚ್‌ 25) ಸುಧೀಂದ್ರ ಕುಲಕರ್ಣಿ, ಬಡತನದ ವಿರುದ್ಧದ ಹೋರಾಟದಲ್ಲಿ ಚೀನಾದಿಂದ ಸೂಕ್ತ ಪಾಠಗಳನ್ನು ಕಲಿತುಕೊಳ್ಳಬೇಕು ಎಂದು ಹೇಳಿದ್ದಾರೆ. ಆದರೆ ನಮ್ಮ ಸರ್ಕಾರಗಳ ಮುಖ್ಯ ಕಾಳಜಿ ಬಡತನ ನಿವಾರಣೆ ಅಲ್ಲ.

ಕೆಲವು ರಾಜ್ಯಗಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ನೇತಾರರು ಮತದಾರರಿಗೆ ಕೊಡುತ್ತಿರುವ ಭರವಸೆಗಳನ್ನುಈ ಮಾತಿಗೆ ಸಮರ್ಥನೆಯಾಗಿ ನೋಡಬಹುದು. ನಮ್ಮ ಪಕ್ಷಗಳಿಗೆ ಆದ್ಯತೆಗಳು ಬೇರೆಯೇ ಇವೆ. ದೇವರು, ಧರ್ಮ, ದೇವಸ್ಥಾನ, ಪೂಜೆ ಪುನಸ್ಕಾರಗಳಂಥ ಭಾವನಾತ್ಮಕ ಸಂಗತಿಗಳೇ ಅವುಗಳಿಗೆ ಹೆಚ್ಚು ಪ್ರಿಯ. ಕಲರ್‌ ಟಿ.ವಿ., ಫ್ರಿಜ್‌, ವಾಷಿಂಗ್‌ ಮಷೀನ್‌, ಲ್ಯಾಪ್‌ಟಾಪ್‌ನಂತಹ ಉಡುಗೊರೆಗಳ‌ ಪೂರೈಕೆಯ ಘೋಷಣೆಗಳೇ ಅವುಗಳಿಗೆ ಹೆಚ್ಚು ಲಾಭದಾಯಕ.ಬಡತನ ನಿವಾರಣೆಯಂತಹ ದೀರ್ಘಾವಧಿ ಯೋಜನೆಗಳು ಬೇಕಾಗಿಲ್ಲ. ಆದ್ದರಿಂದ ಲೇಖಕರ ಆಶಯದಂತೆ ಬಡತನ ನಿವಾರಣೆಗೆ ಚೀನಾದಿಂದ ಪಾಠ ಕಲಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

- ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.