ADVERTISEMENT

ಅತ್ತ ಉಚಿತ ವಿದ್ಯುತ್‌, ಇತ್ತ...

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 20:00 IST
Last Updated 28 ಜೂನ್ 2022, 20:00 IST

ಒಂದೆಡೆ, ಪಂಜಾಬ್ ಸರ್ಕಾರ ಜುಲೈ 1ರಿಂದ ತಮ್ಮ ರಾಜ್ಯದ ಜನರಿಗೆ ಗೃಹ ಬಳಕೆಗಾಗಿ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲು ನಿರ್ಧರಿಸಿದ್ದರೆ, ಇನ್ನೊಂದೆಡೆ, ನಮ್ಮ ಕರ್ನಾಟಕ ಸರ್ಕಾರ ಅದೇ ದಿನದಿಂದ ವಿದ್ಯುತ್ ದರ ಏರಿಸಲು ನಿರ್ಧರಿಸಿರುವುದು ವಿಪರ್ಯಾಸ. ಉಚಿತ ವಿದ್ಯುತ್ ನೀಡುವುದಿರಲಿ ಕೊನೇಪಕ್ಷ ಜನರಿಗೆ ಕೈಗೆಟುಕುವ ದರದಲ್ಲಿಯಾದರೂ ನೀಡಬಹುದಲ್ಲವೇ? ಸರ್ಕಾರ ತನ್ನ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲೇಬೇಕಾದ ಅನಿವಾರ್ಯ ಸ್ಥಿತಿ ಈಗ ಬಂದಿದೆ.

-ಭಾಸ್ಕರ್ ಶೆಟ್ಟಿ,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT