ADVERTISEMENT

ವಾಚಕರವಾಣಿ: ಪರೀಕ್ಷಾ ಸಿದ್ಧತೆ: ಏಕೆ ಈ ಅಸಡ್ಡೆ?

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 22:30 IST
Last Updated 7 ಆಗಸ್ಟ್ 2022, 22:30 IST

ಒಂದು ಕಾಲ ಇತ್ತು. ಯಾವುದೇ ಪ್ರವೇಶ ಪರೀಕ್ಷೆಗೆ ಬಹಳಷ್ಟು ಮುಂಚಿತವಾಗಿಯೇತಯಾರಿ ಪ್ರಾರಂಭವಾಗುತ್ತಿತ್ತು. ಮುಂಚೆಯೇ ಪ್ರವೇಶಪತ್ರ ತೆಗೆದುಕೊಂಡು ಅದರ ಮೇಲೆ ಗೆಜೆಟೆಡ್ ಆಫೀಸರ್ ಸಹಿ ಮತ್ತು ಮೊಹರು ಹಾಕಿಸಿಕೊಂಡು ರೆಡಿಯಾಗಿಟ್ಟುಕೊಂಡಿರುತ್ತಿದ್ದೆವು. ಪರೀಕ್ಷೆಗಾಗಿ ತಿಂಗಳುಗಟ್ಟಲೆ ನಿದ್ದೆಗೆಟ್ಟು ಓದುತ್ತಿದ್ದ ಕಾಲವದು. ಆದರೆ ಈಗ ಕಾಲ ಬದಲಾಗಿದೆ. ಪರೀಕ್ಷೆಯ ಹಿಂದಿನ ದಿನ ಅಷ್ಟೇ ಏಕೆ? ಪರೀಕ್ಷೆಯ ದಿನವೂ ಪ್ರವೇಶಪತ್ರಕ್ಕೆ ಗೆಜೆಟೆಡ್ ಅಧಿಕಾರಿಯ ಸಹಿಗಾಗಿ ಅಲೆದಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಇದೇ ಭಾನುವಾರ (ಆ. 7) ಕೆಪಿಟಿಸಿಎಲ್ ಹುದ್ದೆಗಳಿಗೆ ಪ್ರವೇಶ ಪರೀಕ್ಷೆ ಜರುಗಿತು. ಪರೀಕ್ಷೆಯು ಬೆಳಿಗ್ಗೆ 10.30ಕ್ಕೆ ನಿಗದಿಯಾಗಿದ್ದರೂ 10.15ರವರೆಗೂ ಪ್ರವೇಶ ಪತ್ರಕ್ಕೆ ಗೆಜೆಟೆಡ್ ಅಧಿಕಾರಿಯ ಸಹಿ ಹಾಕಿಸಿಕೊಳ್ಳಲು ಅಭ್ಯರ್ಥಿಗಳು ಪರದಾಡುತ್ತಿದ್ದದ್ದು ಕಂಡುಬಂದಿದ್ದು ವಿಪರ್ಯಾಸ. ಇನ್ನು ಕೆಲವು ಅಭ್ಯರ್ಥಿಗಳು ಪ್ರವೇಶಪತ್ರಗಳಿಗೆ ತಮ್ಮ ಭಾವಚಿತ್ರ ಕೂಡ ಅಂಟಿಸದೆ ಕೈಯಲ್ಲಿ ಫೋಟೊ ಹಿಡಿದುಕೊಂಡು, ಈ ಫೋಟೊ ಮೇಲೆಯೇ ಸಹಿ ಮಾಡುವಂತೆ ಅಧಿಕಾರಿಗಳನ್ನು ಅಂಗಲಾಚುತ್ತಿದ್ದ ದೃಶ್ಯ ಅಯ್ಯೋ ಎನಿಸುವಂತಿತ್ತು. ನೌಕರಿ ಪಡೆಯಲು ಅಗತ್ಯ ಕೊಂಡಿಯಂತೆ ಇರುವ ಪ್ರವೇಶಪತ್ರದ ಬಗ್ಗೆಯೇ ಇಷ್ಟೊಂದು ಅಸಡ್ಡೆ ತೋರುವ ಅಭ್ಯರ್ಥಿಗಳು ಮುಂದೆ ನೌಕರಿ ಹೇಗೆ ಮಾಡುತ್ತಾರೆಯೋ ಗೊತ್ತಿಲ್ಲ.

ಭುವನೇಶ್ವರಿ ಅಚ್ಚೀಗಾಂವ,ವಿಜಯಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.