ADVERTISEMENT

ವಾಚಕರ ವಾಣಿ: ಗ್ರಾಮೀಣ ಆಟ- ಆಯೋಜನೆಯಾಗಲಿ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 22:45 IST
Last Updated 20 ಅಕ್ಟೋಬರ್ 2022, 22:45 IST

ಜನಪದರಿಂದ ಪರಂಪರಾನುಗತವಾಗಿ ಬಳುವಳಿಯಾಗಿ ಬಂದಿರುವ ಗ್ರಾಮೀಣ ಆಟಗಳಲ್ಲಿ ಕೆಲವು ವಿನಾಶದ ಅಂಚಿಗೆ ತಲುಪುತ್ತಿವೆ. ಮಕ್ಕಳು ಈಗ ಮೊಬೈಲ್‌ ಗೇಮ್‌ ಮತ್ತು ಟಿ.ವಿ ವೀಕ್ಷಣೆಯ ಗೀಳಿಗೆ ಬಿದ್ದಿದ್ದಾರೆ. ಅವರನ್ನು ಅಲ್ಲಿಂದ ಹೊರಗೆ ತರಲು ಈ ಬಗೆಯ ಆಟಗಳು ಖಂಡಿತ ನೆರವಾಗಬಲ್ಲವು. ಈ ಆಟಗಳು ನಿಸ್ಸಂದೇಹವಾಗಿ ಈಗಿನ ಮಕ್ಕಳಿಗೆ ಮುದ ನೀಡುತ್ತವೆ. ಮರೆಗೆ ಸರಿದಿರುವ ಈ ಆಟಗಳನ್ನು ಮತ್ತೆ ಸಚೇತನಗೊಳಿಸಿದರೆ ಗ್ರಾಮೀಣ ಆಟಗಳನ್ನು ಉಳಿಸಿಕೊಂಡಂತೆಯೂ ಆಗುತ್ತದೆ.

ಆದರೆ ಈ ಆಟಗಳಿಗೆ ಕಾಯಕಲ್ಪ ನೀಡುವ ಕೆಲಸ ಆಗಬೇಕು. ಇಂತಹ ಆಟಗಳಿಗಾಗಿಯೇ ಪ್ರತ್ಯೇಕ ಕ್ರೀಡಾಕೂಟ ಆಯೋಜಿಸುವ ದಿಸೆಯಲ್ಲಿ ಸರ್ಕಾರ ಯೋಚಿಸಬೇಕು.

ವಿಜಯ್ ರಾಂಪುರ,ಚನ್ನಪಟ್ಟಣ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.