ADVERTISEMENT

ವಾಚಕರ ವಾಣಿ | ಅನಗತ್ಯ ದೃಢೀಕರಣ ಏಕೆ?

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 22:00 IST
Last Updated 9 ಆಗಸ್ಟ್ 2022, 22:00 IST

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಸಂಬಂಧಿಸಿದ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಅಭ್ಯರ್ಥಿಗಳು ಗೆಜೆಟೆಡ್ ಅಧಿಕಾರಿಗಳ ದೃಢೀಕರಣ ಮಾಡಿಸಬೇಕು ಎಂಬ ನಿಬಂಧನೆ ಹಾಕಲಾಗಿತ್ತು. ಇದರಿಂದ ಅಭ್ಯರ್ಥಿಗಳು ಪರೀಕ್ಷೆಗೆ ಅಭ್ಯಾಸ ನಡೆಸುವುದು ಬಿಟ್ಟು ಅಧಿಕಾರಿಗಳ ಸಹಿ ಪಡೆಯಲು ಕಚೇರಿ ಸುತ್ತಬೇಕಾಯಿತು.

ಪ್ರಾಧಿಕಾರ ನಡೆಸುವ ಪರೀಕ್ಷೆಗಳಲ್ಲಿ ಇಂತಹ ದೃಢೀಕರಣ ಸಹಿ ಏತಕ್ಕಾಗಿ ಎಂಬುದು ತಿಳಿಯುವುದಿಲ್ಲ. ಇದು ಅನಗತ್ಯ ಎಂದಾದರೆ, ಮುಂದೆ ನಡೆಯುವ ಪರೀಕ್ಷೆಗಳಲ್ಲಿ ಪ್ರಾಧಿಕಾರವು ಈ ರೀತಿ ಅನವಶ್ಯಕವಾಗಿ ತೊಂದರೆ ಕೊಡುವುದನ್ನು ನಿಲ್ಲಿಸಲಿ.

-ಗಿರೀಶ್ ನಾವಿ,ವಿಜಯಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.