ADVERTISEMENT

ಶಿಕ್ಷಕಸ್ನೇಹಿ ವರ್ಗಾವಣೆ, ವಿದ್ಯಾರ್ಥಿಸ್ನೇಹಿ ವಾತಾವರಣ: ಕ್ರಮ ಕಾರ್ಯಗತವಾಗಲಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 20:00 IST
Last Updated 8 ಸೆಪ್ಟೆಂಬರ್ 2019, 20:00 IST

‘ಪ್ರಜಾವಾಣಿ’ಯ ಫೋನ್‌ ಇನ್‌ ಕಾರ್ಯಕ್ರಮದ ಮೂಲಕ (ಸೆ. 8) ಶಿಕ್ಷಕರ ಬವಣೆ ಆಲಿಸಿದ ಶಿಕ್ಷಣ ಸಚಿವರಿಗೆ ಧನ್ಯವಾದ. ಶಿಕ್ಷಕಸ್ನೇಹಿ ವರ್ಗಾವಣೆ, ವಿದ್ಯಾರ್ಥಿಸ್ನೇಹಿ ವಾತಾವರಣಕ್ಕೆ ಸಂಬಂಧಿಸಿದ ಅವರ ಕಲ್ಪನೆ ಚೆನ್ನಾಗಿದೆ. ಬವಣೆಯನ್ನು ನೀಗಿಸುವ ಕ್ರಮ ಕಾರ್ಯಗತ ಆದಾಗ ಅದಕ್ಕೆ ಬೆಲೆ. ಭ್ರಷ್ಟಾಚಾರವನ್ನು ಯಾರು ಬಂದರೂ ತಡೆಯಲಾಗದು. ಸೇವಾ ಮನೋಭಾವದ ಅರಿವಾದಾಗ ಮಾತ್ರ ಅದು ನಿಲ್ಲುತ್ತದೆ.

ದೈಹಿಕ ಶಿಕ್ಷಣ ಶಿಕ್ಷಕರ ವಿಷಯದಲ್ಲಿ ‘ಫಿಟ್ ಇಂಡಿಯಾ’ ಅನ್‌ಫಿಟ್ ಆಗುತ್ತಿದೆ. ನಾವೆಲ್ಲ 33 ವರ್ಷ ಗಳಿಂದಲೂ ಇದೇ ಸ್ಥಿತಿಯನ್ನು ನೋಡುತ್ತಲೇ ನಿವೃತ್ತಿ ಆಗಿಬಿಟ್ಟೆವು. ರಂಗ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮರೀಚಿಕೆಯಾಗಿದೆ. ಶಿಕ್ಷಕರ ಕಲ್ಯಾಣ ನಿಧಿ ಕೆಲವರಿಗಷ್ಟೇ ಸೀಮಿತವಾಗಿದೆ. ವೈದ್ಯನಾಥನ್ ವರದಿ ಸಲ್ಲಿಕೆಯಾಗಿ ಹಲವು ವರ್ಷಗಳಾಗಿದ್ದರೂ ಇನ್ನೂ ಜಾರಿಯಾಗಿಲ್ಲ. ಇದಕ್ಕೆ ನಮ್ಮ ನಿವೃತ್ತಿಯೇ ಸಾಕ್ಷಿ! ವರ್ಗಾವಣೆಯು ಸಿಕ್ಕವರಿಗೆ ಸೀರುಂಡೆ. ಒಟ್ಟಿನಲ್ಲಿ ಎಲ್ಲಾ ಸಮಸ್ಯೆಗಳೂ ಪರಿಹಾರ ಆಗಬೇಕು. ಕಾದು ನೋಡೋಣ.

-ಅ.ಮೃತ್ಯುಂಜಯ,ಪಾಂಡವಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.