ADVERTISEMENT

ವಾಸ್ತವ ಮರೆಮಾಚುವ ಅನಗತ್ಯ ಸಮರ್ಥನೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಮಾರ್ಚ್ 2021, 19:30 IST
Last Updated 26 ಮಾರ್ಚ್ 2021, 19:30 IST

ಇಂದು, ಏರುತ್ತಿರುವ ಇಂಧನದ ಬೆಲೆ ಒಂದೆಡೆಯಾದರೆ, ದೈನಂದಿನ ಅಗತ್ಯ ವಸ್ತುಗಳ ಬೆಲೆಯಲ್ಲಿನ ಹೆಚ್ಚಳವು ಜನಸಾಮಾನ್ಯರ ಜೀವನವನ್ನು ಕಡುಕಷ್ಟಕ್ಕೆ ತಳ್ಳಿದೆ. ವಸ್ತುಸ್ಥಿತಿ ಹೀಗಿರುವಾಗ, ಆಳುವ ಪಕ್ಷ ಅಥವಾ ಸರ್ಕಾರವನ್ನು ಬೆಂಬಲಿಸಬೇಕೆಂಬ ಏಕೈಕ ಉದ್ದೇಶದಿಂದ, ವಾಸ್ತವದ ಅರಿವಿದ್ದೂ ಪ್ರಸ್ತುತ ಸ್ಥಿತಿಯನ್ನು ಮರೆಮಾಚಿ ಸಮರ್ಥಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ?

ಇಂತಹ ಸಮಸ್ಯೆಗಳ ಕುರಿತು ಇತ್ತೀಚೆಗೆ ಕೆಲ ಸ್ನೇಹಿತರ ಜೊತೆಗೆ ಚರ್ಚೆ ನಡೆಸಿದ ವೇಳೆ, ಬೆಲೆ ಏರಿಕೆ ಕುರಿತು ಅವರಲ್ಲಿ ಒಬ್ಬ, ‘ಆಹಾರ ಸಾಮಗ್ರಿಗಳ ಬೆಲೆಯಲ್ಲಿನ ಹೆಚ್ಚಳವು ನಮಗೆ ಸ್ವಲ್ಪ ಕಷ್ಟವಾದರೂ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದ. ಈ ಉತ್ತರ ನನ್ನನ್ನು ದಿಗ್ಭ್ರಮೆಗೊಳಿಸಿತು. ‘ದೇಶ ಮೊದಲಾ ಅಥವಾ ದೇಶದ ಜನತೆ ಮೊದಲಾ? ಜನರಿಲ್ಲದೆ ರಾಷ್ಟ್ರ ಹೇಗೆ ಅಸ್ತಿತ್ವದಲ್ಲಿರಲು ಸಾಧ್ಯ’ ಎಂಬ ನನ್ನ ಪ್ರಶ್ನೆಗೆ ಅವನ ಉತ್ತರ ನಿರೀಕ್ಷಿಸಿದ ಹಾಗೆ ಸಮರ್ಥನೆಯಲ್ಲೇ ಕೊನೆಯಾಯಿತು. ವಿಪರ್ಯಾಸವೆಂದರೆ, ಈಗಿನ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡಿದರೆ, ಹಿಂದಿನ ಸರ್ಕಾರಗಳ ವೈಫಲ್ಯದ ಬಗ್ಗೆ ಮಾತನಾಡುತ್ತಾರೆ. ಈ ಸಮರ್ಥನೆ
ಗಳಿಗೆ ಕೊನೆಯಿದೆಯೇ?

ನಮ್ಮಲ್ಲಿರುವ ಸವಾಲುಗಳಿಗೆ ಅದರ ಮೂಲಕಾರಣವನ್ನು ಹುಡುಕಬೇಕೇ ವಿನಾ ನಮ್ಮನ್ನು ಒಂದು ಸೀಮಿತ ಚೌಕಟ್ಟಿಗೆ ಒಳಪಡಿಸಿಕೊಂಡರೆ, ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕು ಎಂಬಂತೆ ಮುಂದೊಂದು ದಿನ ವಾಸ್ತವಕ್ಕೆ ನಾವು ಮುಖಾಮುಖಿ ಆಗಲೇಬೇಕಾಗುತ್ತದೆ. ಆಗ ನಮ್ಮ ಒಳ ಮನಸ್ಸಿಗೆ ಸೂಕ್ತ ಉತ್ತರ ಕೊಟ್ಟುಕೊಳ್ಳಲು ಸಾಧ್ಯವಿದೆಯೇ?

ADVERTISEMENT

- ಪ್ರವೀಣ ನಾಗಪ್ಪ ಯಲವಿಗಿ,ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.