ADVERTISEMENT

ಮನೋವಿಜ್ಞಾನ: ಕಡ್ಡಾಯ ಕಲಿಕೆ ಇರಲಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 19:30 IST
Last Updated 21 ಫೆಬ್ರುವರಿ 2020, 19:30 IST

ಮನೋವಿಜ್ಞಾನದ ಕಲಿಕೆಯನ್ನು ಪದವಿಪೂರ್ವ ಹಂತದಿಂದಲೇ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಬೇಕಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಸಂಪರ್ಕಕ್ಕೆ ಬರುವವರ ವ್ಯಕ್ತಿತ್ವವನ್ನು ಸೂಕ್ತವಾಗಿ ಅರಿಯಲು ಸಾಧ್ಯವಾಗುತ್ತದೆ. ಅವರಲ್ಲಿ ವಿಶ್ವಾಸ ವೃದ್ಧಿಯಾಗಿ, ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ಗುಣ ಬೆಳೆಯುತ್ತದೆ. ಜೊತೆಗೆ ತಮ್ಮನ್ನು ಯಾರಾದರೂ ವಂಚಿಸಲು ಯತ್ನಿಸಿದರೆ ಅದನ್ನು ಬೇಗ ಪತ್ತೆಹಚ್ಚಲು ಸಹ ನೆರವಾಗುತ್ತದೆ. ಹೀಗಾಗಿ ಮನೋವಿಜ್ಞಾನವು ಐಚ್ಛಿಕ ವಿಷಯವಾಗದೆ ಕಡ್ಡಾಯ ಕಲಿಕೆಯ ವಿಷಯವಾಗುವಂತೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು.

-ಶ್ರುತಿ ಬಿಜ್ಜರಗಿ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT