ADVERTISEMENT

 ವಾಚಕರ ವಾಣಿ | ಹೊನಲು ಬೆಳಕಿನ ಪಂದ್ಯ ಅನಿವಾರ್ಯವೇ?

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 19:45 IST
Last Updated 13 ಮಾರ್ಚ್ 2022, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಐದು ದಿನಗಳ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆರಂಭವಾಗಿದೆ. ಜೊತೆಗೆ, ಭಾರತದ ನಾನಾ ಕ್ರೀಡಾಂಗಣಗಳಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಪ್ರತಿದಿನ ಐಪಿಎಲ್ ಕ್ರಿಕೆಟ್ ಟೂರ್ನಿ ಆಯೋಜನೆಗೊಂಡಿದ್ದು, ಅವುಗಳಲ್ಲಿ ಬಹುತೇಕ ಹೊನಲು ಬೆಳಕಿನ ಪಂದ್ಯಗಳೇ ಆಗಿವೆ.

ನೈಸರ್ಗಿಕವಾಗಿ ಸೂರ್ಯನ ಬೆಳಕು ಇರುವಾಗ ರಾತ್ರಿಯಲ್ಲಿ ವಿದ್ಯುತ್ ದೀಪಗಳನ್ನು ಬಳಸಿ ಆಟ ಆಡುವ ಔಚಿತ್ಯವಾದರೂ ಏನು? ವಿದ್ಯುತ್ ಕೂಡಾ ನೈಸರ್ಗಿಕ ಸಂಪತ್ತು ಎಂದೇ ಭಾವಿಸಬೇಕು. ಇದು ವಿದ್ಯುತ್ತನ್ನು ಅನಗತ್ಯವಾಗಿ ಪೋಲು ಮಾಡುವ ವಿಚಾರವೇ ಹೌದಲ್ಲವೇ? ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಸರಿಯಾದ ಸಮಯಕ್ಕೆ ವಿದ್ಯುತ್ ಸಿಗದಿರುವುದರಿಂದ ಬೆಳೆಗಳಿಗೆ ನೀರು ಹರಿಸಲಾಗದೆ ರೈತ ಕಂಗಾಲಾಗಿದ್ದಾನೆ. ಆಹಾರದ ಉತ್ಪನ್ನ ಕುಂಠಿತವಾಗುತ್ತಿದೆ. ಇಲ್ಲಿ ಅನಗತ್ಯವಾಗಿ ಬಳಸುವ ವಿದ್ಯುತ್ತು ಹಳ್ಳಿಗಳೆಡೆಗೆ ಹರಿದರೆ ಆಹಾರದ ಅಭಾವ ಕಡಿಮೆ ಆಗುವುದರ ಜೊತೆಗೆ ರೈತನ ಮುಖದಲ್ಲೂ ಮಂದಹಾಸ ಮೂಡುತ್ತದೆ. ಆಟ ಅಥವಾ ಮನರಂಜನೆಗಾಗಿ ನೈಸರ್ಗಿಕ ಸಂಪತ್ತು ಪೋಲಾಗುವುದು ಎಷ್ಟು ಸರಿ? ಹಗಲಲ್ಲಿ ಆಟವಾಡಿದರೆ ಬೇಡ ಎನ್ನುವವರಾರು? ಇಂತಹ ಅನಗತ್ಯ ಪೋಲುಗಳಿಗೆ ಕಡಿವಾಣ ಹಾಕಬೇಕು.
-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT