ADVERTISEMENT

ವಿಡಿಯೊ ಪ್ರಸಾರ ಸರಿಯೇ?

ಸಂದೀಪ್ ಕೆ.ಮಂಗಳೂರು
Published 4 ಜುಲೈ 2019, 19:09 IST
Last Updated 4 ಜುಲೈ 2019, 19:09 IST

ರಾಜ್ಯದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರದ ಪ್ರಕರಣವೊಂದು ಎರಡು ದಿನಗಳಿಂದ ಸುದ್ದಿಯಾಗಿದೆ. ಈ ಅತ್ಯಾಚಾರದ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಟಿ.ವಿ ಮಾಧ್ಯಮಗಳು ಸುದ್ದಿ ನೀಡಿದವು.

ಇವುಗಳಲ್ಲಿ ಬಹುಪಾಲು ಚಾನೆಲ್‌ಗಳು ವಿಡಿಯೊವನ್ನು ಮಸುಕುಗೊಳಿಸಿ ಪ್ರಸಾರ ಮಾಡಿದವು. ಎಷ್ಟೇ ಮಸುಕು ಮಾಡಿ
ದರೂ ಅಲ್ಲಿ ನಡೆಯುತ್ತಿರುವುದು ಏನು ಎನ್ನುವುದು ಯಾರಿಗಾದರೂ ಅರ್ಥವಾಗದೇ ಇರದು. ವಿಡಿಯೊವನ್ನು ಮಸುಕುಗೊಳಿಸುವ ಮುನ್ನ ಅದನ್ನು ನಿರ್ವಹಿಸುವವರು ನೋಡಿರಲಾರರೇ? ಅವರಿಗೆ ಈ ವಿಡಿಯೊ ಎಲ್ಲಿಂದ ದೊರಕಿತು ಎನ್ನುವುದೂ ಪ್ರಶ್ನಾರ್ಹ. ಅತ್ಯಾಚಾರದ ವಿಡಿಯೊವನ್ನು ಯಾವುದೇ ರೀತಿಯಲ್ಲಿ ಬಳಸಿದರೂ ಅದು ತಪ್ಪೇ. ಇಲ್ಲಿ ಮಾನವೀಯತೆಯ ಪ್ರಶ್ನೆಯೂ ಇದೆ. ಟಿ.ವಿ.ಗಳು ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಇಂತಹ ವಿಡಿಯೊಗಳನ್ನು ಪ್ರಸಾರ ಮಾಡುವುದು ದುರದೃಷ್ಟಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT