ADVERTISEMENT

ಪಡಿತರ: ಪಡಿಪಾಟಲು ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 20:00 IST
Last Updated 19 ಜುಲೈ 2019, 20:00 IST

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಬೆರಳಚ್ಚು ಕೊಡಬೇಕಾದ ಸಂದರ್ಭದಲ್ಲಿ ಜನ ಅನುಭವಿಸಬೇಕಾಗಿರುವ ಸಂಕಷ್ಟಗಳ ಬಗ್ಗೆ ಶಾರದಾ ಗೋಪಾಲ ಅರ್ಥಪೂರ್ಣ ಮಾಹಿತಿ ನೀಡಿದ್ದಾರೆ (ಸಂಗತ, ಜುಲೈ 15).

ಬೆರಳಚ್ಚು ನೀಡುವುದು, ಪ್ರತಿ ತಿಂಗಳು ಅದನ್ನು ದೃಢೀಕರಿಸುವುದು ಅಮಾನವೀಯ ವ್ಯವಸ್ಥೆ. ನನ್ನ ಪತ್ನಿ ಕೆಲವು ತಿಂಗಳ ಹಿಂದೆ ಬೆರಳಚ್ಚು ನೀಡಲು ಹೋದಾಗ ಎಷ್ಟುಬಾರಿ ಪ್ರಯತ್ನಪಟ್ಟರೂ ತೆಗೆದುಕೊಳ್ಳದೆ, ಕಂಪ್ಯೂಟರ್ ಆಪರೇಟರ್ ಬಾಯಿಗೆ ತುತ್ತಾಗಬೇಕಾಗಿ ಬಂದು, ಕೊನೆಗೆ ನನ್ನ ತಲೆಗೆ ಕಟ್ಟಿದರು. ನಾನು ಹೋದಾಗ, ನಾಳೆ ಬನ್ನಿ, ಈಗ ಬನ್ನಿ ಎಂಬ ಮಾತು ಕೇಳಿ ಬೇಸತ್ತು, ಈ ಪಡಿತರವೇ ಬೇಡ ಎನ್ನುವಂತಾಗಿದೆ. ಎಲ್ಲರಿಗೂ ಒಂದು ನಿರ್ದಿಷ್ಟ ಸಂಖ್ಯೆಯನ್ನು ನೀಡಿ (ಬ್ಯಾಂಕ್ ಖಾತೆ ಸಂಖ್ಯೆ ರೀತಿ) ಬೆರಳಚ್ಚು ವ್ಯವಸ್ಥೆಗೆ ತಿಲಾಂಜಲಿ ನೀಡುವುದು ಒಳ್ಳೆಯದು.

ಅ.ಮೃತ್ಯುಂಜಯ,ಪಾಂಡವಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.