ಎಟಿಎಂಗಳಲ್ಲಿ ಹಣ ಖಾಲಿಯಾದ 3 ಗಂಟೆಯೊಳಗೆ ಮತ್ತೆ ಹಣ ತುಂಬಿಸದ ಬ್ಯಾಂಕುಗಳಿಗೆ ದಂಡ ವಿಧಿಸಲು ಆರ್‌ಬಿಐ ಮುಂದಾಗಿರುವುದು ಸ್ವಾಗತಾರ್ಹ. ಬಹುತೇಕ ಎಟಿಎಂಗಳಲ್ಲಿ ಯಾವಾಗ ನೋಡಿದರೂ ‘ನೋ ಬ್ಯಾಲೆನ್ಸ್’ ಫಲಕ ನೋಡಿ ಗ್ರಾಹಕರು ರೋಸಿಹೋಗಿದ್ದಾರೆ. ಹತ್ತಾರು ಎಟಿಎಂಗಳಿಗೆ ಅಲೆದಾಡಿದರೂ ಹಣ ದೊರೆಯ ದಿರುವುದೂ ಇದೆ. ಗ್ರಾಹಕರ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರ್‌ಬಿಐ ನಿರ್ಧಾರ ಸೂಕ್ತವಾಗಿದೆ.
-ಪರಮೇಶ್ವರ ಬಿ. ಬಿರಾದಾರ,ಬೀದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.