ADVERTISEMENT

ಪುನರ್‌ಪರಿಶೀಲಿಸಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 19:58 IST
Last Updated 28 ಜನವರಿ 2020, 19:58 IST

ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದ ಆಂಧ್ರಪ್ರದೇಶವು ಮೂರು ರಾಜಧಾನಿಗಳನ್ನು ಹೊಂದಲು ಚಿಂತನೆ ನಡೆಸಿರುವುದು ಸರಿ ಅನಿಸುವುದಿಲ್ಲ. ರಾಜಧಾನಿಯನ್ನು ಹೊಂದುವ ಪ್ರಮುಖ ಉದ್ದೇಶವೇ ಎಲ್ಲ ಇಲಾಖೆಗಳ ಮುಖ್ಯ ಕಚೇರಿಗಳು ಯಾವುದಾದರೂ ಒಂದು ನಗರದಲ್ಲಿ ಇರಬೇಕು ಎಂಬ ಕಾರಣದಿಂದ. ಹೀಗೆ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ರಾಜಧಾನಿ ಒಂದೇ ನಗರವಾಗಿರದೆ ಬೇರೆ ಬೇರೆ ನಗರಗಳಾಗಿದ್ದರೆ ಸರ್ಕಾರದ ದಕ್ಷತೆ ಮತ್ತು ಕಾರ್ಯಕ್ಷಮತೆ ತಗ್ಗಬಹುದು.

ಇದರ ಉದ್ದೇಶ ಏನೇ ಇದ್ದರೂ ಜನಸಾಮಾನ್ಯರು ಹಾಗೂ ಅಧಿಕಾರಿಗಳಿಗೆ ತೊಂದರೆ ಉಂಟಾಗಬಹುದು. ಮೂರು ರಾಜಧಾನಿಗಳ ಪರಿಕಲ್ಪನೆಯನ್ನು ದಕ್ಷಿಣ ಆಫ್ರಿಕಾದಿಂದ ಪಡೆಯಲಾಗಿದೆ ಎನ್ನಲಾಗಿದೆ. ಆದರೆ ಅಲ್ಲಿನ ಜನರ ಬೇಡಿಕೆಗಳೇ ಬೇರೆ, ಇಲ್ಲಿನ ಜನರ ಬೇಡಿಕೆಗಳೇ ಬೇರೆ. ಹೀಗಾಗಿ ಆಂಧ್ರಪ್ರದೇಶವು ತನ್ನ ಈ ನಿರ್ಧಾರದ ಕುರಿತು ಪುನರ್‌ಪ‍ರಿಶೀಲನೆ ನಡೆಸಬೇಕು.

ಅಭಿಲಾಷ್ ನಾಟೇಕರ್,ಬೀದರ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.