ADVERTISEMENT

ಆಲೋಚನೆಗೆ ಹಚ್ಚುವ ಬರಹ, ಅನಗತ್ಯ ಟೀಕೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಜುಲೈ 2021, 19:30 IST
Last Updated 15 ಜುಲೈ 2021, 19:30 IST

ಅನಕೃ ನಿಧನರಾಗಿ ಐವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಅನಕೃ ಆದರ್ಶಗಳು ಮತ್ತು ವ್ಯಕ್ತಿತ್ವದ ಬಗ್ಗೆ ರಘುನಾಥ ಚ.ಹ. ಅವರು ಬರೆದ ಲೇಖನ (ಪ್ರ.ವಾ., ಜುಲೈ 14) ಸಮಯೋಚಿತವಾಗಿದೆ. ಇಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಬೇಕಾದ ಅನಕೃ ಅವರ ಮಾದರಿಯ ಕನ್ನಡಪ್ರಜ್ಞೆ ಮತ್ತು ವೈಚಾರಿಕತೆಯ ಅಗತ್ಯವನ್ನು ಮನಮುಟ್ಟುವಂತೆ ವಿವರಿಸಿ, ಓದುಗರನ್ನು ಆಲೋಚನೆಗೆ ಹಚ್ಚುತ್ತದೆ. ಲೇಖಕರು ಅನಕೃ ಹೃದಯದಲ್ಲಿ ಬೆಳಗುತ್ತಿದ್ದ ಕನ್ನಡದ ದೀಪದ ಮೂಲಕವೇ ಅನಕೃ ವ್ಯಕ್ತಿತ್ವದ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ. ಆದರೆ ಹಿಂದೂ ಧರ್ಮದ ಮೌಲ್ಯಗಳ ಪ್ರತಿಪಾದನೆ ವಿಚಾರವಾಗಿ ಭೈರಪ್ಪನವರ ಕಾದಂಬರಿಗಳ ಬಗ್ಗೆ ಈ ಲೇಖನದಲ್ಲಿ ಟೀಕೆ ಅನಗತ್ಯವಾಗಿತ್ತು.

ಸಾಹಿತ್ಯದ ವಿದ್ಯಾರ್ಥಿಗಳು ಭೈರಪ್ಪ ಹಾಗೂ ಅನಕೃ ಕಾದಂಬರಿಗಳನ್ನು ಲೇಖನದಲ್ಲಿ ವಿವರಿಸಲಾಗಿರುವ ಹಲವಾರು ಅಂಶಗಳ ಮೇಲೆ ಆಳವಾದ ಅಧ್ಯಯನ ಮಾಡಲು ಲೇಖನ ಖಂಡಿತ ಪ್ರೇರೇಪಿಸುತ್ತದೆ. ಆದರೆ ಅನಕೃ ಸ್ಮರಣೆಯ ಸಂದರ್ಭದ ಈ ಬರಹದಲ್ಲಿ ಭೈರಪ್ಪನವರ ಕಾದಂಬರಿಗಳ ಕುರಿತಾದ ಒಂದು ಟೀಕೆಯ ಮಾತಿನಿಂದಾಗಿ, ಅನಕೃ ಕೇಂದ್ರಿತವಾಗಬೇಕಿದ್ದ ನಮ್ಮ ಗಮನವೆಲ್ಲಾ ಅನವಶ್ಯಕವಾಗಿ ಭೈರಪ್ಪನವರ ಬದುಕು ಮತ್ತು ಬರಹಗಳ ಕಡೆಗೆ ಹರಿಯುವಂತೆ ಆಗುತ್ತದೆ.

- ಡಾ. ಎಂ.ರವೀಂದ್ರ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.