ADVERTISEMENT

ವಾಚಕರ ವಾಣಿ | ಜಿಲ್ಲಾಧಿಕಾರಿ ಮೆರವಣಿಗೆ: ಮಾದರಿ ನಡೆಯಲ್ಲ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 17:49 IST
Last Updated 24 ಫೆಬ್ರುವರಿ 2021, 17:49 IST

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕಾಗಿ ಬಂದ ಜಿಲ್ಲಾಧಿಕಾರಿಗೆ ಹೆಸರಘಟ್ಟ ಹೋಬಳಿಯ ಹನಿಯೂರು ಗ್ರಾಮಸ್ಥರು ಪೂರ್ಣಕುಂಭ ಸ್ವಾಗತ ನೀಡಿ, ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿದ್ದಾರೆ (ಪ್ರ.ವಾ., ಫೆ. 21). ಇದು ಗ್ರಾಮಸ್ಥರ ಸೌಜನ್ಯ ಮತ್ತು ಮುಗ್ಧತೆಗೆ ನಿದರ್ಶನ. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ಈ ನಡೆ ಒಪ್ಪುವಂಥದ್ದಲ್ಲ. ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಅಧಿಕಾರಿಗಳ ಪ್ರಮುಖ ಕರ್ತವ್ಯ. ಅಂತಹ ಉದ್ದೇಶಕ್ಕಾಗಿ ಗ್ರಾಮಕ್ಕೆ ಬಂದ ಅಧಿಕಾರಿಗಳನ್ನು ಸ್ವಾಗತಿಸಲು ಮೆರವಣಿಗೆಯೇ ಮಾರ್ಗವಲ್ಲ. ಅಷ್ಟಕ್ಕೂ ಗ್ರಾಮಸ್ಥರೇ ಕಚೇರಿಗಳಿಗೆ ಬಂದಾಗ ಆಗದೇ ಇರುವ ಕೆಲಸ ಅಧಿಕಾರಿಗಳು ಗ್ರಾಮಕ್ಕೆ ಬಂದಾಗ ಮಾತ್ರ ಆಗುವುದು ನಿಜವೇ? ಕಚೇರಿಗಳಲ್ಲಿ ಕೆಲಸ ಸಲೀಸಾಗಿ ಆಗುವುದು ಸಾಧ್ಯವಿಲ್ಲವೆಂದಾದರೆ ಅದಕ್ಕೆ ಮೂಲಕಾರಣಗಳನ್ನು ಹುಡುಕುವುದು ಮಾರ್ಗವಾಗಬೇಕು. ಇಲ್ಲವೇ ಸರ್ಕಾರಿ ಕಚೇರಿಗಳ ನಿರ್ವಹಣೆಯನ್ನು ತಪ್ಪಿಸಿ ‘ಮೊಬೈಲ್ ಕಚೇರಿ’ಗಳನ್ನು ಆರಂಭಿಸಬಹುದಲ್ಲವೇ?

-ಡಾ. ಜಿ.ಬೈರೇಗೌಡ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT