ADVERTISEMENT

ಅಸಹ್ಯಕರ ಪೋಸ್ಟಿಂಗ್‌ ಸಲ್ಲ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 16:15 IST
Last Updated 15 ನವೆಂಬರ್ 2021, 16:15 IST

ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸೋತ ನಂತರ ಭಾರತ ಕ್ರಿಕೆಟ್‌ ತಂಡದ ಆಟಗಾರರ ವಿರುದ್ಧ ಆಕ್ರೋಶವು ಮಾಧ್ಯಮಗಳಲ್ಲಿ ಮತ್ತು ಮುಖ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಮುಂದುವರಿದಿದೆ. ಕೆಲವು ಪೋಸ್ಟಿಂಗ್‌ಗಳು ತೀರಾ ಅಸಹ್ಯಕರವಾಗಿದ್ದು, ಅಸಹನೀಯವಾಗಿ ಕಾಣುತ್ತಿವೆ. ಕ್ರಿಕೆಟ್‌ ಅಭಿಮಾನಿಗಳ ದುಃಖ ಮತ್ತು ನಿರಾಸೆ ಅರ್ಥವಾಗುವಂಥದ್ದಾದರೂ ಅದನ್ನು ವ್ಯಕ್ತ ಮಾಡುವ ರೀತಿಯಲ್ಲಿ ಸಂಯಮ ಅವಶ್ಯ. ನಮ್ಮ ಜನಪ್ರತಿನಿಧಿಗಳೂ ಚುನಾವಣೆಯ ಪೂರ್ವದಲ್ಲಿ ನಾನಾ ರೀತಿಯ ಭರವಸೆಗಳನ್ನು ನೀಡಿ ಆಯ್ಕೆಯಾಗುತ್ತಾರೆ. ಅವರೆಂದೂ ಅದನ್ನು ನೆರವೇರಿಸುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಆದರೂ ಅವರ ವಿರುದ್ಧ ಎಂದೂ ಈ ಬಗೆಯಲ್ಲಿ ಆಕ್ರೋಶ ವ್ಯಕ್ತವಾಗುವುದಿಲ್ಲ. ಭರವಸೆಯ ವಿಷಯದಲ್ಲಿ ಈ ದ್ವಂದ್ವ ನೀತಿ ಯಾಕೆ?

-ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT