ADVERTISEMENT

ವಾಚಕರ ವಾಣಿ | ಸಂವಿಧಾನ ನಮ್ಮೆಲ್ಲರ ಧರ್ಮವಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಆಗಸ್ಟ್ 2021, 19:45 IST
Last Updated 17 ಆಗಸ್ಟ್ 2021, 19:45 IST

ಧರ್ಮವನ್ನು ಸಂಕುಚಿತ ನೆಲೆಯಲ್ಲಿ ಅರ್ಥೈಸಿಕೊಂಡು, ದೇಶದ ಸಂವಿಧಾನ, ಕಾನೂನು ಸುವ್ಯವಸ್ಥೆಗಳನ್ನು ಧರ್ಮದ ಅಡಿಯಾಳಾಗಿ ಮಾಡಿದರೆ, ನಾಗರಿಕ ಸಮಾಜ ಅಥವಾ ರಾಷ್ಟ್ರ ಯಾವ ಗತಿಗೀಡಾಗುತ್ತದೆ ಎಂಬುದಕ್ಕೆ ಅಫ್ಗಾನಿಸ್ತಾನದ ಬೆಳವಣಿಗೆಗಳೇ ನಿದರ್ಶನ. ದೇಶವನ್ನು, ಜನರನ್ನು ಮುನ್ನಡೆಸುವ ಸಾಧನವು ಸಂವಿಧಾನ ಹಾಗೂ ಕಾನೂನುಗಳು ಆಗಬೇಕೇ ವಿನಾ ಧರ್ಮಗಳಲ್ಲ‌.

ಯಾಕೆಂದರೆ ಸಂವಿಧಾನವು ದೇಶದಲ್ಲಿ ಸಮಾನತೆಯನ್ನು ಬಯಸಿ, ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಧರ್ಮಗಳು ಪ್ರತಿಷ್ಠೆಗೆ ಕಾರಣವಾಗಿ ಜನರ ಹಿತಾಸಕ್ತಿಯನ್ನು ಬಲಿಕೊಡುತ್ತವೆ.ಹಾಗಾಗಿ, ಸಂವಿಧಾನಕ್ಕಿಂತ ಮಿಗಿಲಾದ ಧರ್ಮ, ಪ್ರಜಾಪ್ರಭುತ್ವಕ್ಕಿಂತ ದೊಡ್ಡದಾದ ತತ್ವ ಬೇರೊಂದಿಲ್ಲ. ಹಾಗಾಗಿ, ನಮ್ಮೆಲ್ಲರ ಮೂಲ ಧರ್ಮ ಮತ್ತು ತತ್ವವು ಸಂವಿಧಾನ ಹಾಗೂ ಪ್ರಜಾ ಪ್ರಭುತ್ವ ಆಗಬೇಕೇ ವಿನಾ ಧರ್ಮಗಳಲ್ಲ.

-ಕೆ.ಜೆ.ಕೊಟ್ರಗೌಡ,ತೂಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.