ADVERTISEMENT

ಜೀವನೋಪಾಯ ಕೇಂದ್ರಗಳ ನಿರ್ಲಕ್ಷ್ಯವೇಕೆ?

​ಪ್ರಜಾವಾಣಿ ವಾರ್ತೆ
Published 7 ಮೇ 2020, 20:15 IST
Last Updated 7 ಮೇ 2020, 20:15 IST

ಶ್ರಮಿಕ ವರ್ಗಕ್ಕೆ ರಾಜ್ಯ ಸರ್ಕಾರದಿಂದ ಅರ್ಥಿಕ ನೆರವು ಘೋಷಣೆಯಾಗಿರುವುದು ಮೆಚ್ಚುವ ಕಾರ್ಯ. ಆದರೆ, ಸೇವಾ ಕೇಂದ್ರಗಳು, ಸೈಬರ್ ಸೆಂಟರ್, ಜೆರಾಕ್ಸ್ ಸೆಂಟರ್, ಸಣ್ಣ ಪುಟ್ಟ ಕಿರಾಣಿ ಅಂಗಡಿಗಳು, ಹಿಟ್ಟಿನ ಗಿರಣಿಗಳು, ಪೆಟ್ಟಿಗೆ ಅಂಗಡಿಗಳಂತಹವರ ‘ಜೀವನೋಪಾಯ ಕೇಂದ್ರಗಳ’ ನಿರ್ಲಕ್ಷ್ಯ ತರವಲ್ಲ.

ಇಲ್ಲಿ ದಿನನಿತ್ಯ ನಡೆಯುತ್ತಿದ್ದ ಸಣ್ಣ ಮಟ್ಟದ ವಾಹಿವಾಟಿನಿಂದ ಅವರ ಜೀವನ ಸಾಗುತ್ತಿತ್ತು. ಈಗಿನ ಪರಿಸ್ಥಿತಿಯಿಂದ ಅವರೆಲ್ಲ ಸುಧಾರಿಸಿಕೊಳ್ಳಲು ಆರು ತಿಂಗಳಿಗೂ ಹೆಚ್ಚು ಕಾಲ ಬೇಕಾಗುತ್ತದೆ.

ಕೊನೇಪಕ್ಷ ಹತ್ತು ಸಾವಿರ ರೂಪಾಯಿ ಒಳಗಿನ ವಹಿವಾಟು ನಡೆಸುವವರ ಅಂಗಡಿಗಳ ಮೂರು ತಿಂಗಳ ಬಾಡಿಗೆ ಮೊತ್ತ ತುಂಬಿಕೊಡುವ ಮತ್ತು ಅವರ ಮಕ್ಕಳ ಶಾಲಾ ಶುಲ್ಕ ರಿಯಾಯಿತಿ, ವಿದ್ಯುತ್ ಬಿಲ್ ಮನ್ನಾದಂತಹ ಕ್ರಮಗಳ ಮೂಲಕ ಸರ್ಕಾರ ನೆರವಿಗೆ ಧಾವಿಸಲಿ.

ADVERTISEMENT

-ಮಂಜು ಡಿ.ಎಲ್.,ನೆಲಮಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.